ವಾರಣಾಸಿ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗಂಗಾ ನದಿಯ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು ಭಾನುವಾರ ಬೆಳಿಗ್ಗೆ 71.56 ಮೀಟರ್‌ಗೆ ತಲುಪಿದ್ದು, ಇದು ಅಪಾಯದ ಮಟ್ಟವನ್ನು ಮೀರಿದೆ. ಪರಿಣಾಮವಾಗಿ, ವಾರಣಾಸಿಯ ಮಣಿಕರ್ಣಿಕಾ ಹಾಗೂ ಹರಿಶ್ಚಂದ್ರ ಘಾಟ್‌ಗಳಲ್ಲಿ ಶವ ಸಂಸ್ಕಾರಗಳಲ್ಲಿ ತೊಂದರೆ ಉಂಟಾಗಿದೆ.
ಪವಿತ್ರ ಘಾಟ್‌ಗಳವರೆಗೆ ದೋಣಿಗಳ ಮೂಲಕ ಶವ ಸಾಗಿಸಲಾಗುತ್ತಿದೆ. ಕಾಶಿ ವಿಶ್ವನಾಥ ಧಾಮದ ಗಂಗಾ ದ್ವಾರ, ದಶಾಶ್ವಮೇಧ, ಅಸ್ಸಿ ಘಾಟ್‌ಗಳು ಜಲಾವೃತವಾಗಿದ್ದು, ನಿತ್ಯದ ಗಂಗಾ ಆರತಿ ಬೀದಿಗಳಲ್ಲಿ ನಡೆಯುತ್ತಿದೆ.
26 ಹಳ್ಳಿಗಳು ಮತ್ತು 21 ನಗರ ಬಡಾವಣೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಜನತೆ ಮನೆ ತೊರೆದಿದ್ದಾರೆ.
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎನ್‌ಡಿಆರ್‌ಎಫ್, ಜಲ ಪೊಲೀಸ್, ಪುರಸಭೆ, ಆರೋಗ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯ ಮೇಲ್ವಿಚಾರಣೆಯಲ್ಲಿ ತೊಡಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa