ಹುಬ್ಬಳ್ಳಿ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಪಕ್ಷದ ನಾಯಕರು ಪಾಕಿಸ್ತಾನದಲ್ಲಿ ಹೀರೋ ಆಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು,
ಕಾಂಗ್ರೆಸ್ ಪಕ್ಷ ದೇಶದ ಹಿತವನ್ನ ಮರೆತು ಪಾಕಿಸ್ತಾನದ ಪರ ಮೃದು ಸ್ವಭಾವ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನವನ್ನು ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದಿದ್ದು,
ಮಾಲೆಗಾಮಂವ್ ಪ್ರಕರಣದ ನಂತರದ ಘಟನೆಗಳಲ್ಲಿ ನಡೆದುಕೊಂಡದ್ದು ಗೊತ್ತಿದೆ. ತನಿಖೆ ಸ್ಥಗಿತಗೊಳಿಸಿ ಶರತ್ ಪವಾರ್‌ರ ಪಕ್ಷ ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಪ್ರಯತ್ನ ಮಾಡಿದರು. ಸಂಜೋತ ಹಾಗೂ ಮಾಲೆಗಾಂವ್ ಘಟನೆ ಹೋಲಿಕೆ ಮಾಡಲು ಪ್ರಯತ್ನಿಸಿ, ಪಾಕಿಸ್ತಾನವನ್ನು ರಕ್ಷಿಸುವ ಕೆಲಸ ಮಾಡಿದರು ಎಂದು ಆರೋಪಿಸಿದರು .
ಕೇಂದ್ರ ಸರಕಾರ ಪಾಕಿಸ್ತಾನವನ್ನ ಜಗತ್ತಿನಲ್ಲಿ ಬೆತ್ತಲೆ ಮಾಡುವ ಪ್ರಯತ್ನದಲ್ಲಿದ್ದೆ, ಆದರೆ ಮಾಲೆಗಾಂವ್ ಪ್ರಕರಣದಲ್ಲಿ ಆರಂಭಿಕ ಆರೋಪಿಗಳನ್ನು ಖುಲಾಸೆಗೊಳಿಸುವ ಕೆಲಸವನ್ನ ಕಾಂಗ್ರೆಸ್‌ನವರು ಮಾಡಿದರು.
ಕಾಂಗ್ರೆಸ್ ನಾಯಕರು ದೇಶದಲ್ಲಿ ಹೀರೊ ಆಗೋದನ್ನ ಬಿಟ್ಟು ಪಾಕಿಸ್ತಾನದಲ್ಲಿ ಹೀರೊ ಆಗಲು ಹೊರಟಿದ್ದಾರೆ. ಪಹಲ್ಗಾಮ್ ಉಗ್ರರು ಪಾಕಿಸ್ತಾನದವರೇ ಎಂದು ಹೇಳಲು ಏನು ಸಾಕ್ಷಿ ಅಂತ ಚಿದಂಬರಂ ಕೇಳುದ್ದು, ಕಾಂಗ್ರೆಸ್ಸಿನ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಸಾಕ್ಷಿ ಎಂದು ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa