ಬಳ್ಳಾರಿ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಸೈಕ್ಲಿಂಗ್ ಅಂಡ್ ರನ್ನಿಂಗ್ ಕ್ಲಬ್ ಮತ್ತು ಜೆಎಸ್‍ಡಬ್ಲ್ಯೂ ಏರ್ಪಡಿಸಿದ್ದ `ಸ್ಟೀಲ್ ಸಿಟಿ ರನ್-2025'ರಲ್ಲಿ 4000 ಸ್ಪರ್ಧಿಗಳು ಪಾಲ್ಗೊಂಡು 10 ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಮತ್ತು ಬೆಂಗಳೂರಿನ ತೇಜಸ್ವಿನಿ ಪ್ರಥಮ ಸ್ಥಾನ ಪಡೆದಿದ್ದರೆ. 64 ವರ್ಷ ವಯಸ್ಸಿನ ಬೆಳಗಾವಿಯ ರೈತ ಬಸ್ಸಪ್ಪ 10 ಕಿಲೋ ಮೀಟರ್ ಓಟದಲ್ಲಿ ಪಾಲ್ಗೊಂಡು ಓಟವನ್ನು ಪೂರ್ಣಗೊಳಿಸಿದ್ದು ಸ್ಪರ್ಧೆಯ ವಿಶೇಷವಾಗಿತ್ತು.
ಪುರುಷರ ವಿಭಾಗದಲ್ಲಿ 10 ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಅವರು 30 ನಿಮಿಷ 1 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿದ್ದು, ಮಹಿಳೆಯ ವಿಭಾಗದಲ್ಲಿ ಬೆಂಗಳೂರಿನ ತೇಜಸ್ವಿನಿ 37 ನಿಮಿಷ 10 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.
10 ಮತ್ತು 05 ಕಿಲೋ ಮೀಟರ್ ಓಟದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ, ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಸಿಪಿಐ ಸುಭಾಷ್ ಚಂದ್ರ, ಪಿಎಸ್‍ಐ ಕಾಳಿಂಗ, ಬಳ್ಳಾರಿ ಸೈಕ್ಲಿಂಗ್ ಅಂಡ್ ರನ್ನಿಂಗ್ ಕ್ಲಬ್‍ನ ಸದಸ್ಯರಾದ
ಸಂದೀಪ್, ಪ್ರಶಾಂತ, ಸಾಗರ, ವಿಕಾಸ್, ಓಂ, ಡಾ. ಬಿ.ಕೆ. ಸುಂದರ್, ಡಾ. ತಿಪ್ಪಾರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.
ಜಿಂದಾಲ್ ಕಂಪನಿಯ ಸಿಇಓ ಮುರಗನ್ ಅವರು ಈ ಸ್ಪರ್ಧೆಗಳನ್ನು ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್