ನವದೆಹಲಿ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಮೇಲೆ 25% ಸುಂಕ ವಿಧಿಸಿರುವ ಅಮೆರಿಕದ ಕ್ರಮವನ್ನು ಕೆನಡಾದ ಉದ್ಯಮಿ ಕಿರ್ಕ್ ಲುಬಿಮೊವ್ ಟೀಕಿಸಿದ್ದಾರೆ. ಟ್ರಂಪ್ ಅವರ ಈ ನೀತಿ ದೀರ್ಘಾವಧಿಯಲ್ಲಿ ಅಮೆರಿಕವನ್ನು ಶಕ್ತಿ ಹೀನಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತ ಜಾಗತಿಕ ವೇದಿಕೆಯಲ್ಲಿ ಗೌರವ ಪಡೆದ ರಾಷ್ಟ್ರವಾಗಿದ್ದು, ಪ್ರಧಾನಿ ಮೋದಿ ವಿಶ್ವದ ಪ್ರಭಾವಿ ನಾಯಕರಾಗಿದ್ದಾರೆ. ಚೀನಾ-ಬ್ರಿಕ್ಸ್ ಪ್ರಭಾವ ಬೆಳೆಸುತ್ತಿರುವ ಸಂದರ್ಭದಲ್ಲಿ, ಭಾರತ ಅಮೆರಿಕ-ಕೆನಡಾ ಅವರ ನೈಸರ್ಗಿಕ ಮಿತ್ರವಾಗಬಹುದೆಂದು ಲುಬಿಮೊವ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಭಾರತವನ್ನು ದಂಡಿಸದೇ, ಆರ್ಥಿಕ ಸಹಕಾರ ವಿಸ್ತರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa