ಮತಾಂತರ ಆರೋಪ : ಛತ್ತೀಸ್‌ಗಢದಲ್ಲಿ ಬಂಧಿತ ಸನ್ಯಾಸಿಗಳಿ ಗೆ ಜಾಮೀನು
ರಾಯಪುರ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ದುರ್ಗ್‌ನಲ್ಲಿ ಮತಾಂತರ ನಡೆಸುತ್ತಿರುವ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿಗಳಿಗೆ ಬಿಲಾಸ್ಪುರ್‌ನ ಎನ್‌ಐಎ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಇವರ ಜಾಮೀನಿನ ಅರ್ಜಿ ಕುರಿ
Bail


ರಾಯಪುರ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ದುರ್ಗ್‌ನಲ್ಲಿ ಮತಾಂತರ ನಡೆಸುತ್ತಿರುವ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿಗಳಿಗೆ ಬಿಲಾಸ್ಪುರ್‌ನ ಎನ್‌ಐಎ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಇವರ ಜಾಮೀನಿನ ಅರ್ಜಿ ಕುರಿತು ಎನ್‌ಐಎ ನ್ಯಾಯಾಲಯದಲ್ಲಿ ಶುಕ್ರವಾರ ವಿಚಾರಣೆ ನಡೆದಿತ್ತು, ಇಂದುನ್ಯಾಯಾಧೀಶ ಸಿರಾಜುದ್ದೀನ್ ಖುರೇಶಿ ಅವರು ಜಾಮೀನಿನ ಮಂಜೂರು ಮಾಡಿದ್ದಾರೆ.

ಜುಲೈ 25ರಂದು ದುರ್ಗ್ ರೈಲು ನಿಲ್ದಾಣದಲ್ಲಿ ಈ ನನ್‌ಗಳನ್ನು ಬಂಧಿಸಲಾಗಿದ್ದು, ಈ ವಿಚಾರ ಸಂಸತ್ತಲ್ಲಿಯೂ ಗದ್ದಲ ಉಂಟುಮಾಡಿತ್ತು. ವಾಮಪಂಥೀಯ ನಾಯಕಿ ವೃಂದಾ ಕರಾತ್ ಹಾಗೂ ಕೇರಳದ ಸಂಸದರೊಬ್ಬರು ಸನ್ಯಾಸಿನಿಯರ ಬೆಂಬಲಕ್ಕೆ ಛತ್ತೀಸ್‌ಗಢಕ್ಕೆ ಆಗಮಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande