ಜಮ್ಮು, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇನ್ನೊಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದರೊಂದಿಗೆ ಹತ್ಯೆಯಾದ ಉಗ್ರರ ಸಂಖ್ಯೆ 2ಕ್ಕೆ ಏರಿದೆ.
ಶುಕ್ರವಾರ ಸಂಜೆ ಆರಂಭವಾದ ಎನ್‌ಕೌಂಟರ್ ವೇಳೆ, ಪುಲ್ವಾಮಾದ ಭಯೋತ್ಪಾದಕ ಹ್ಯಾರಿಸ್ ನಜೀರ್ ದಾರ್ ಮೃತನಾಗಿದ್ದಾನೆ. ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಶೋಧ ನಡೆಸಿದಾಗ, ಎಕೆ-47 ರೈಫಲ್‌ಗಳು, ಮ್ಯಾಗಜೀನ್‌ಗಳು ಹಾಗೂ ಗ್ರೆನೇಡ್‌ಗಳು ಸೇರಿದಂತೆ ಸಾಕಷ್ಟು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಪ್ರಸ್ತುತ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa