ಹಿಮಾಚಲದಲ್ಲಿ ಭಾರಿ ಮಳೆಯ ಆರ್ಭಟ
ಶಿಮ್ಲಾ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಊನಾದಲ್ಲಿ ಸ್ವಾನ್ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ. ಪೌಂಗ್ ಡ್ಯಾಂನಿಂದ ನೀರು ಬಿಡುಗಡೆ ಸಾಧ್ಯತೆ ಇದ್ದು, ಕಾ
Rain


ಶಿಮ್ಲಾ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಊನಾದಲ್ಲಿ ಸ್ವಾನ್ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ.

ಪೌಂಗ್ ಡ್ಯಾಂನಿಂದ ನೀರು ಬಿಡುಗಡೆ ಸಾಧ್ಯತೆ ಇದ್ದು, ಕಾಂಗಡಾ ಹಾಗೂ ಪಂಜಾಬ್‌ನ ಹೋಶಿಯಾರ್‌ಪುರ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಮನಾಲಿ-ಕೆಲಾಂಗ್ ಹಾಗೂ ಮನಾಲಿ-ರೋಹ್ತಾಂಗ್ ರಸ್ತೆಗಳು ಭೂಕುಸಿತದಿಂದ ಬಂದ್ ಆಗಿದ್ದು, ಕುಲ್ಲುವಿನಲ್ಲಿ ಅಚಾನಕ್ ಪ್ರವಾಹದಿಂದ ಮಲಾಣಾ ಪವರ್ ಪ್ರಾಜೆಕ್ಟ್‌ನ ಡ್ಯಾಂ ಭಾಗಶಃ ಧ್ವಂಸವಾಗಿದೆ.

ಈವರೆಗೆ 176 ಮಂದಿ ಮೃತಪಟ್ಟಿದ್ದು, 36 ಮಂದಿ ನಾಪತ್ತೆಯಾಗಿದ್ದಾರೆ. ಮಳೆಯು ರಾಜ್ಯಕ್ಕೆ ₹1678 ಕೋಟಿ ನಷ್ಟ ಉಂಟು ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande