ಸಮಾನತೆ-ಭ್ರಾತೃತ್ವವೇ ನಿಜವಾದ ಸಾಮಾಜಿಕ ನ್ಯಾಯಕ್ಕೆ ಆಧಾರ : ಸಿದ್ದರಾಮಯ್ಯ
ನವದೆಹಲಿ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಮಾನತೆ ಮತ್ತು ಭ್ರಾತೃತ್ವದ ಆಧಾರದ ಮೇಲೆ ನಿಜವಾದ ಸಾಮಾಜಿಕ ನ್ಯಾಯ ಸಾಧ್ಯ. ಇದನ್ನು ಸಾಧಿಸುವುದು ದೇಶದ ಪ್ರತಿಯೊಬ್ಬ ಪ್ರಜೆ ಮತ್ತು ಸರ್ಕಾರದ ನೈತಿಕ ಹೊಣೆಗಾರಿಕೆಯಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನವದೆಹಲಿಯಲ್ಲಿ ಎಐಸಿಸಿಯ ಕಾನೂ
Cm


ನವದೆಹಲಿ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಮಾನತೆ ಮತ್ತು ಭ್ರಾತೃತ್ವದ ಆಧಾರದ ಮೇಲೆ ನಿಜವಾದ ಸಾಮಾಜಿಕ ನ್ಯಾಯ ಸಾಧ್ಯ. ಇದನ್ನು ಸಾಧಿಸುವುದು ದೇಶದ ಪ್ರತಿಯೊಬ್ಬ ಪ್ರಜೆ ಮತ್ತು ಸರ್ಕಾರದ ನೈತಿಕ ಹೊಣೆಗಾರಿಕೆಯಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನವದೆಹಲಿಯಲ್ಲಿ ಎಐಸಿಸಿಯ ಕಾನೂನು ವಿಭಾಗ ಆಯೋಜಿಸಿದ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಸಮಾನತೆ ಮತ್ತು ಭ್ರಾತೃತ್ವದ ಕಲ್ಪನೆಗಳು ಎಂಬ ವಿಷಯದ ಕಾರ್ಯಕ್ರಮದಲ್ಲಿ ಮಾತನಾಡಿ,

ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಿ ಉಳಿಯಬಾರದು. ಅದನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅನುಷ್ಠಾನಗೊಳಿಸಬೇಕು. ನಮ್ಮ ಸಂವಿಧಾನವು ಕೇವಲ ಕಾನೂನು ದಾಖಲೆಯಲ್ಲ; ಅದು ಈ ದೇಶದ ಸಮಾನತೆಯ ಪ್ರತೀಕ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನೆಹರೂ ಅವರು ಭಾರತದಲ್ಲಿ ಜಾತಿರಹಿತ ಹಾಗೂ ವರ್ಗರಹಿತ ಸಮಾಜವನ್ನು ನಿರ್ಮಿಸುವ ಕನಸು ಕಂಡಿದ್ದರು ಎಂದರು. “ಭ್ರಾತೃತ್ವವಿಲ್ಲದೆ ಸಮಾನತೆ ಸಾಧ್ಯವಿಲ್ಲ” ಎಂಬ ಅಂಬೇಡ್ಕರ್ ಅವರ ನುಡಿಯನ್ನು ಉಲ್ಲೇಖಿಸುತ್ತಾ, ಇಂದು ವೈವಿಧ್ಯಮಯ ಸಮಾಜದಲ್ಲಿ ಸಂವಿಧಾನದ ಮೂಲಕ ಸಾಮಾನ್ಯ ಸಹೋದರತ್ವವನ್ನು ಬೆಳೆಸಬೇಕಿದೆ ಎಂದರು.

ಕಾನೂನಾತ್ಮಕ ನಿಷ್ಠೆ ಮತ್ತು ಸಮಗ್ರ ಹಸ್ತಕ್ಷೇಪದ ಅಗತ್ಯವನ್ನು ಎತ್ತಿ ಹಿಡಿದ ಅವರು, “ನೈಜ ಸಮಾನತೆಯನ್ನು ಸಾಧಿಸಲು ಕಾನೂನು ವ್ಯವಸ್ಥೆಯು ಸಕ್ರಿಯವಾಗಿ ಕೆಲಸ ಮಾಡಬೇಕು. ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ನೀಡುವ ಪ್ರಕ್ರಿಯೆಯೇ ನಿಜವಾದ ಸಾಮಾಜಿಕ ನ್ಯಾಯ,” ಎಂದು ಸಿದ್ದರಾಮಯ್ಯ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande