ಪ್ರಾಮಾಣಿಕ ಪ್ರಯತ್ನದಿಂದ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ
ಕೊಪ್ಪಳ, 13 ಆಗಸ್ಟ್ (ಹಿ.ಸ.) ಆ್ಯಂಕರ್: ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ನಾಲ್ವಡ ಅವರು ಹೇಳಿದ್ದಾರೆ. ನಗರದ ಶೋಭಾ ಹಾಲ್ ನಲ್ಲಿ ಹುಬ್ಬಳ್ಳಿಯ ಛೇಂಬರ್ ಆಫ್ ಕಾಮರ್ಸ್ ಕೊಡ
ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧನಿದ್ದರೇ ಮಾತ್ರ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ


ಕೊಪ್ಪಳ, 13 ಆಗಸ್ಟ್ (ಹಿ.ಸ.)

ಆ್ಯಂಕರ್: ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ನಾಲ್ವಡ ಅವರು ಹೇಳಿದ್ದಾರೆ.

ನಗರದ ಶೋಭಾ ಹಾಲ್ ನಲ್ಲಿ ಹುಬ್ಬಳ್ಳಿಯ ಛೇಂಬರ್ ಆಫ್ ಕಾಮರ್ಸ್ ಕೊಡಮಾಡಿದ ವಾಣಿಜ್ಯ ರತ್ನ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಛೋಪ್ರಾ ಕುಟುಂಬ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕಾರ ಮಾಡಿ ಅವರು ಮಾತನಾಡಿದರು.

ಈ ಪ್ರಶಸ್ತಿ ಬಂದಿದೆ ಎಂದರೆ ನನಗೆ ಮಾರ್ಗದರ್ಶನ ಮಾಡಿದ ವೀರಬಸಪ್ಪ ಬಳ್ಳೊಳ್ಳಿ, ಹೆಬ್ಬಾಳ ಶಿವಪ್ಪ ಅವರನ್ನು ಸ್ಮರಿಸ ಬೇಕು. ನಾನು ಎಂದು ಸಹ ಅಧಿಕಾರವನ್ನು ಬಯಸಿಲ್ಲಿ, ರಾಜಕೀಯ ಕ್ಕೆ ಬರಬೇಡ ಅಂತಾ ಹೇಳಿದ್ದರಿಂದ ರಾಜಕೀಯದಿಂದ ದೂರವೇ ಇದ್ದೇನೆ. ವ್ಯವಹಾರದಲ್ಲಿ ಪ್ರಮಾಣಿಕತೆ ಬಹಳ ಮುಖ್ಯವಾಗಿದ್ದು, ಅದನ್ನು ಅಳವಡಿಸಿಕೊಂಡಿದ್ದೇನೆ. ಇಸ್ತ್ರಿ ಅಂಗಿಯಲ್ಲಿದ್ದರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ.‌ ಸಮಯ ಬಂದರೆ ಅಂಗಿ ಕಳೆದು ಹಮಾಲಿ ಮಾಡಲು ಸಿದ್ದರಿದ್ದರಿರಬೇಕು ಎಂದು ಹೇಳಿದ ಅವರು, ಈ ಪ್ರಶಸ್ತಿಯನ್ನು ಕೊಪ್ಫಳಕ್ಕೆ ವ್ಯಾಪಾರಸ್ಥರಿಗೆ ಅರ್ಪಿಸುತ್ತೇನೆ ಎಂದರು.

ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ. ವಿ. ಚಂದ್ರಶೇಖರ ಮಾತನಾಡಿ, ಸಿದ್ದಣ್ಣ ನಾಲ್ವಡ ಅವರು ಶ್ರೀ ಗವಿಸಿದ್ದಶ್ವರ ಅವರ ಪರಮ ಭಕ್ತರಾಗಿದ್ದಾರೆ. ಅವರ ವ್ಯಾಪಾರ ಕ್ಷೇತ್ರದಲ್ಲಿ ಬಹುದೊಡ್ಡ ಸೇವೆ ಮಾಡಿದ್ದಾರೆ. ಹಾಗೆ ಸಮಾಜ‌ ಮುಖಿ ಕಾರ್ಯದಲ್ಲಿಯೂ ಸದಾ ಮುಂಚೂಣಿಯಲ್ಲಿದ್ದಾರೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ಮಹೇಂದ್ರ ಛೋಪ್ರಾ ಅವರು ಮಾತನಾಡಿ, ವಾಣಿಜ್ಯೋದ್ಯಮಿಗಳಾದ ಸಿದ್ದಣ್ಣ ನಾಲ್ವಡ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಬಂದಿರುವುದು ಕೊಪ್ಪಳದ ಹೆಮ್ಮೆಯಾಗಿದೆ. ಅವರು ವರ್ತಕರಾಗಿ ದೊಡ್ಡ ಸೇವೆ ಮಾಡಿದ್ದಾರೆ ಎಂದರು. ಅತ್ಯಂತ ಕಿರಿದಾದ ವ್ಯಾಪಾರ ಮಾಡುತ್ತಲೇ ಮೇಲೆ ಬಂದಿದ್ದಾರೆ ಎಂದರು. ಯಾರಾದರೂ ಜಗಳವಾಡಿಕೊಂಡು ಬಂದರೆ ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥ ಮಾಡುತ್ತಾರೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಪುರದ ಅವರು ಮಾತನಾಡಿ, ಸಿದ್ದಣ್ಣ ನಾಲ್ವಡ ಅವರಿಗೆ ವಾಣಿಜ್ಯ ರತ್ನ ಬಂದಿದ್ದು ಅತ್ಯಂತ ಸೂಕ್ತವಾಗಿದೆ ಎಂದರು.

ಕಾಂತಿಲಾಲ ಛೊಪ್ರಾ, ಮಲ್ಲಣ್ಣ ಬಳ್ಳೊಳ್ಳಿ, ಸಿಎ ಅಸೋಸಿಯೇಷನ್ ಅಧ್ಯಕ್ಷರಾದ ಸಂಜಯ ಕೊತ್ಬಾಳ, ಚಂದ್ರಕಾಂತ ತಾಲೆಡ, ಭಾರತಿ ನಾಲ್ವಡ, ಲಲಿತಾ ಛೊಪ್ರಾ ಇದ್ದರು. ಪದಮ ಮೇಹತಾ ಅವರು ಕಾರ್ಯಕ್ರಮ ನಿರೂಪಿಸಿದರು.

13ಕೆಪಿಎಲ್32 ಕೊಪ್ಪಳ ನಗರದ ಶೋಬಾ ಹಾಲ್ ನಲ್ಲಿ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ನಾಲ್ವಡ ಅವರನ್ನು ಸನ್ಮಾನಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande