ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ-ಡಿಡಿಪಿಐ ಕೃಷ್ಣಮೂರ್ತಿ
ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ-ಡಿಡಿಪಿಐ ಕೃಷ್ಣಮೂರ್ತಿ
ಕೋಲಾರದ ಸ್ಕೌಟ್ಸ್ಭವನದಲ್ಲಿ ವರ್ಗಾವಣೆಯಾಗಿರುವ ಡಿಡಿಪಿಐ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.


ಕೋಲಾರ, ೧೭ ಆಗಸ್ಟ್ (ಹಿ.ಸ) :

ಆ್ಯಂಕರ್ : ಸಮಾಜ ಕಟ್ಟುವ ಶಿಕ್ಷಕರು ಪ್ರಾತಃಸ್ಮರಣೀಯರು, ಇಂತಹ ಪವಿತ್ರ ವೃತ್ತಿಯಲ್ಲಿ ಸಿಗುವ ಸಂತೋಷ, ಆತ್ಮತೃಪ್ತಿ ಬೇರಾವ ವೃತ್ತಿಯಲ್ಲೂ ಸಿಗದು ಅಂತಹ ಶಿಕ್ಷಕರ ಹಿತ ಕಾಯುವ ಅಧಿಕಾರಿಯಾಗಿ ಸಲ್ಲಿಸಿದ ಸೇವೆ ಆತ್ಮತೃಪ್ತಿ ತಂದಿದೆ ಎಂದು ಕಳೆದ ನಾಲ್ಕು ವರ್ಷಗಳಿಂದ ಕೋಲಾರದ ಡಿಡಿಪಿಐ ಆಗಿದ್ದು ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.

ಶನಿವಾರ ನಗರದ ಸ್ಕೌಟ್ಸ್ಭವನದಲ್ಲಿ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕ ಸಂಘಟನೆಗಳು ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು..

ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿರ್ವಹಿಸಿದ ಜವಾಬ್ದಾರಿಗಳು ನನಗೆ ತೃಪ್ತಿ ತಂದಿದೆ ಮತ್ತು ಪ್ರಾಮಾಣಿಕತೆ, ಬದ್ದತೆಯಿಂದ ಕೆಲಸ ಮಾಡಿದ್ದೇನೆ ಇದಕ್ಕಾಗಿ ಎಲ್ಲರ ಸಹಕಾರವೂ ಸಿಕ್ಕಿದೆ ಎಂದು ಧನ್ಯವಾದ ಸಲ್ಲಿಸಿದರು.

ನನ್ನ ಜೀವನದಲ್ಲಿ ಶಾಲೆಗಳ ಪುಟಾಣಿಗಳೊಂದಿಗೆ ಕಳೆದ ಸಮಯವೇ ನನಗೆ ಅತ್ಯಂತ ಖುಷಿ ನೀಡಿರುವುದು ಎಂದ ಅವರು, ತಮ್ಮ ಅವಧಿಯಲ್ಲಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಪ್ರಯತ್ನ ಮಾಡಿ ಯಶ ಕಂಡಿದ್ದೇನೆ. ನನ್ನ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಮಾರ್ಗದರ್ಶನ ನೀಡಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಇ-ಖಾತಾ ಮಾಡಿಸುವಲ್ಲಿ ಡಿಸಿಯವರ ಮಾರ್ಗದರ್ಶನದಲ್ಲಿ ಯಶಸ್ಸು ಸಾಧಿಸಿದ್ದೇವೆ, ಈ ಕಾರ್ಯ ತಮಗೆ ಹೆಚ್ಚಿನ ಸಂತಸ ತಂದಿದೆ ಎಂದರು.

ಮಾಲೂರು ಬಿಇಒ ಹೆಚ್.ಎಸ್. ಚಂದ್ರಕಲಾ ಮಾತನಾಡಿ, ಶೈಕ್ಷಣಿಕವಾಗಿ ಚಟುವಟಿಕೆಗಳನ್ನು ಕೈಗೊಳ್ಳಲು, ಆಡಳಿತನಡೆಸಲು ಅವರು ಡಿಡಿಪಿಐ ಅವರು ನೀಡಿದ ಮಾರ್ಗದರ್ಶನ ಶ್ಲಾಘನೀಯವಾಗಿದ್ದು, ಅವರ ಬದುಕಿನಲ್ಲಿ ಮತ್ತಷ್ಟು ಉತ್ತಮ ಅವಕಾಶಗಳು ಲಭಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಎಸ್.ಆರ್.ವೀಣಾ, ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟಸ್ವಾಮಿ, ಶಿಕ್ಷಣ ಸಂಯೋಜಕ ಶಶಿಧರ್,ವಿಷಯಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲ, ಶರಣಪ್ಪಜಮಾದಾರ್,ಬಿಬಿತಾ, ವೆಂಕಟೇಶಬಾಬು, ಮುಖ್ಯಶಿಕ್ಷಕ ಗೋಪಿನಾಥ್,ಇಸಿಒ ಕೆ.ಶ್ರೀನಿವಾಸ್, ಎಸ್ಸಿಎಸ್ಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುನಿಯಪ್ಪ, ಇಲಾಖೆ ವ್ಯವಸ್ಥಾಪಕ ಗೋವಿಂದಗೌಡ, ಅಧೀಕ್ಷಕ ಕೇಶವರೆಡ್ಡಿ,ಸುಬ್ರಮಣಿ,ರವಿಕುಮಾರ್ ಮತ್ತಿತರರಿದ್ದರು.

ಚಿತ್ರ : ಕೋಲಾರದ ಸ್ಕೌಟ್ಸ್ಭವನದಲ್ಲಿ ವರ್ಗಾವಣೆಯಾಗಿರುವ ಡಿಡಿಪಿಐ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande