ಹೆಚ್.ಐ.ವಿ. ಏಡ್ಸ್ ಅರಿವು ಕುರಿತು ಜನಜಾಗೃತಿ
ಗದಗ, 13 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಜಿಲ್ಲೆಯ ರೆಡ್ ರಿಬ್ಬನ್ ಕಾಲೇಜುಗಳು ಮತ್ತು ಜಿಲ್ಲೆಯ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳು ಹಾಗೂ ಶ್ರೀಮತಿ ಎಂ.ಬಿ.
ಪೋಟೋ


ಗದಗ, 13 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಜಿಲ್ಲೆಯ ರೆಡ್ ರಿಬ್ಬನ್ ಕಾಲೇಜುಗಳು ಮತ್ತು ಜಿಲ್ಲೆಯ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳು ಹಾಗೂ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಾಹಾವಿದಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಯುವ ದಿನ ಹಾಗೂ ತೀವ್ರತರ ಹೆಚ್.ಐ.ವಿ. ಅರಿವಿನ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಸಮಾರಂಭ ಉದ್ಘಾಟಿಸಿದ ಡ್ಯಾಪ್ಕೂ ಅಧಿಕಾರಿಗಳಾದ ಡಾ. ಅರುಂಧತಿ ಕೆ. ಅವರು ಮಾತನಾಡಿ ಯೌವನವನ್ನು ಸದುಪಯೋಗಪಡಿಸಿಕೊಳ್ಳಲು ಮಾನಸಿಕ ದೈಹಿಕ ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವೈಕ್ತಿಗಳಾಗಿ ಬೆಳೆಯಬೇಕು ಹಾಗೂ ಹೆಚ್.ಐ.ವಿ. ಏಡ್ಸ್ ಅರಿವಿನ ಮಾಸಾಚರಣೆಯಲ್ಲಿ ರೋಗದ ಬಗ್ಗೆ ಮಾಹಿತಿ ತಿಳಿಯಲು ಕರೆ ನೀಡಿದರು. “ಸುಸ್ಥಿರ ಅಭಿವೃಧ್ದಿಗಾಗಿ ಸ್ಥಳೀಯ ಯುವ ಜನರ ಪಾತ್ರ ಹಾಗೂ ಗುರಿಗಳು” ಈ ವರ್ಷದ ಘೋಷಣೆಯಂತೆ ಎನ್ನುವಂತೆ ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕೆಂದು ತಿಳಿ ಹೇಳಿದರು.

ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗಿದ್ದು, ಗುರು ಹಿರಿಯರು, ತಂದೆ ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ತಂತ್ರಜ್ಞಾನಕ್ಕೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ 40% ಇರುವ ಯುವಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾಣವನ್ನು ಕೈಗೊಂಡು ಸದೃಡವಾದ ದೇಶ ಕಟ್ಟುವಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದರು. ಹಾಗೂ ರಕ್ತದಾನ ಮಾಡಲು ಯುವ ಸಮುದಾಯ ಮುಂದಾಗಬೇಕು, ರಕ್ತದಾನ ಮಾಡಲು ಹೆಚ್.ಬಿ. ಪ್ರಮಾಣ 12.5 ಗ್ರಾಂ ಇರಬೇಕು, ತೂಕ 45 ಕೆ.ಜಿ. ಗಿಂತ ಹೆಚ್ಚಿಗೆ ಇರಬೇಕು, 18 ರಿಂದ 60 ವಯೋಮಾನದ ಪುರುಷ ಮಹಿಳೆ ಎಂಬ ಬೇಧವಿಲ್ಲದೆ ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದು ತಿಳಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಸದೃಢ ಆರೋಗ್ಯ ಮತ್ತು ಸನ್ನಡತೆಗೆ ಪ್ರಮಾಣ ವಚನ ಬೋಧಿಸಿದರು.

ಬಿ.ಬಿ.ಲಾಳಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ಪ್ರಾಸ್ತಾವಿಕವಾಗಿ ಮಾತನಾಡಿ ಅಂತರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವವನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ಥುತ ನ್ಯಾಯ ಸಮ್ಮತವಾಗಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿರುವುದೆಂದು ತಿಳಿಸಿದರು. ರಕ್ತದಾನ ಮಾಡಲು ಹಾಗೂ ರೋಗಿಯ ಜೀವ ಉಳಿಸಲು ವೈದ್ಯರಾಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಗಂಗೂಬಾಯಿ ಪವಾರರವರು ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಯವ್ವನವನ್ನು ಜೋಪಾನ ಮಾಡಿಕೊಳ್ಳಬೇಕು ಹಾಗೂ ಇಲಾಖೆಯ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಾಮಾಜಿಕ ಸೇವೆಗೆ ಮುಂದಾಗಬೇಕೆಂದು ಹೇಳಿದರು.

ಸಮಾರಂಭದಲ್ಲಿ ಪ್ರೊ. ವಿ.ಪಿ ಪಾಟೀಲ, ಪ್ರೊ. ಎನ್. ಜಿ. ಚನ್ನಪ್ಪಗೌಡರ, ಪ್ರೋ. ವಿ.ಬಿ. ತಾಳಿ, ಪ್ರೋ. ಎಸ್ ವಾಯ್ ಕಠಾರೆ, ಪ್ರೋ. ಎಲ್.ಎಸ್. ಹೊಸಳ್ಳಿ, ಸಂತೋಷ ಬಡಿಗೇರ, ಕಾಲೇಜ ಹಾಗೂ ಆರೋಗ್ಯ ಸಿಬ್ಬಂದಿ ವರ್ಗ ಹಾಜರಿದ್ದರು.

ಕುಮಾರಿ ಹಜರತ್ಬೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಸಹನಾ ಜಂಬಗಿ ಇವರು ಸ್ವಾಗತಿಸಿದರು. ಕುಮಾರ ಶ್ರೀಕಾಂತ ಕರಡಿ ವಂದಿಸಿದರು. ಕುಮಾರಿ ಆಫ್ರೀನ್ ಹಾಗೂ ಕು. ರವಿಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande