ಕೊಪ್ಪಳ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಯುವನಿಧಿ ಯೋಜನೆಯ ಫಲಾನುಭವಿಗಳು ಸ್ವಯಂ ಘೋಷಣೆಯನ್ನು ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಗಸ್ಟ್-2025 ತಿಂಗಳಿನಲ್ಲಿ ಆಗಸ್ಟ್ 1 ರಿಂದ ಆ. 25 ರೊಳಗೆ ಸ್ವಯಂ ಘೋಷಣೆ ನೀಡಲು ಸೇವಾ ಸಿಂಧು ಪೋರ್ಟ್‍ಲ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ದೃಢೀಕರಣ ನೀಡಲು ತಪ್ಪಿದ್ದಲ್ಲಿ ಯುವನಿಧಿ ನಿರುದ್ಯೋಗ ಭತ್ಯೆಗೆ ಅರ್ಹರಾಗುವುದಿಲ್ಲ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶದ ದಿನದಿಂದ 180 ದಿನಗಳು ಪೂರ್ಣಗೊಂಡ ಮೇಲೆ ಸೇವಾ ಸಿಂಧು ಪೋರ್ಟ್‍ಲ್‍ನಲ್ಲಿ ತಾವು ಯಾವುದೇ ಉದ್ಯೋಗದಲ್ಲಿ ಇಲ್ಲವೆಂದು (ಸರ್ಕಾರಿ, ಸರ್ಕಾರೇತರ), ಉನ್ನತ ವ್ಯಾಸಂಗ ಮುಂದುವರೆಸಿಲ್ಲವೆಂದು ಅಥವಾ ಸ್ವಯಂ ಉದ್ಯೋಗ ಹೊಂದಿಲ್ಲವೆಂದು ದೃಢೀಕರಿಸಲು ಕಡ್ಡಾಯವಾಗಿರುತ್ತದೆ. ಈ ಸ್ವಯಂ ಘೋಷಣೆ ಮೂರು ತಿಂಗಳಿಗೊಮ್ಮೆ ಸೇವಾ ಸಿಂಧು ಪೋರ್ಟ್‍ಲ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
2023 ಅಥವಾ 2024ನೇ ಅಥವಾ 2025ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ತೇರ್ಗಡೆಯಾಗಿ ಅರ್ಜಿ ಸಲ್ಲಿಸದೇ ಇರುವ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟ್‍ಲ್ ವೆಬ್‍ಸೈಟ್ ಮೂಲಕ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಅಥವಾ ಕೊಪ್ಪಳ ಯುವನಿಧಿ ಸಹಾಯವಾಣಿ ಸಂಖ್ಯೆ: 1800 599 7154ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್