ಗೋಧಿ ದಾಸ್ತಾನು ಮಿತಿ ನಿಗದಿ
ವಿಜಯಪುರ, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನಿರ್ದೇಶಕರ ಅವರ ಜೂನ್ 2ರ ಪತ್ರದ ಮೇರೆಗೆ ಮುಕ್ತ ಮಾರುಕಟ್ಟೆಯ ಸಗಟುದಾರರಿಗೆ 3 ಸಾವಿರ ಮೆರ್ಟಿಕ್ ಟನ, ರಿಟೇಲರಗಳಿಗೆ 10 ಮೇರ್ಟಿಕ್ ಟನ ಹಾಗೂ ಉತ್ಪಾದಕರಿಗೆ ಅವರ ಉತ್ಪಾದನಾ ಸಾಮರ್ಥದ ಶೇ 70ರಷ್ಟು
ಗೋಧಿ ದಾಸ್ತಾನು ಮಿತಿ ನಿಗದಿ


ವಿಜಯಪುರ, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನಿರ್ದೇಶಕರ ಅವರ ಜೂನ್ 2ರ ಪತ್ರದ ಮೇರೆಗೆ ಮುಕ್ತ ಮಾರುಕಟ್ಟೆಯ ಸಗಟುದಾರರಿಗೆ 3 ಸಾವಿರ ಮೆರ್ಟಿಕ್ ಟನ, ರಿಟೇಲರಗಳಿಗೆ 10 ಮೇರ್ಟಿಕ್ ಟನ ಹಾಗೂ ಉತ್ಪಾದಕರಿಗೆ ಅವರ ಉತ್ಪಾದನಾ ಸಾಮರ್ಥದ ಶೇ 70ರಷ್ಟು ಗೋಧಿ ದಾಸ್ತಾನು ಮಿತಿಯನ್ನು ದಿನಾಂಕ 31-03-2026ರವರೆಗೆ ನಿಗದಿ ಪಡಿಸಲಾಗಿದೆ.

ಅದರಂತೆ ಜಿಲ್ಲೆಯ ಗೋಧಿ ಸಗಟು ವ್ಯಾಪಾರಸ್ಥರು, ರಿಟೇಲರ್ಸ್ ಹಾಗೂ ಗೋಧಿ ಉತ್ಪಾದನೆ ಮಾಡುವವರು ತಮ್ಮಲಿರುವ ಗೋಧಿ ದಾಸ್ತಾನಿನ ಮಾಹಿತಿಯನ್ನು ತುರ್ತಾಗಿ ಕೇಂದ್ರ ಸರ್ಕಾರದ ವೆಬ್‌ಸೈಟ್https://evegoils.nic.in/wsp/login ನಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಯಾವುದೇ ವ್ಯಾಪಾರಸ್ಥರು ಗೋಧಿ ದಾಸ್ತಾನಿನ ಮಾಹಿತಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳದಿದ್ದರೇ ಅಂತಹ ವ್ಯಾಪಾರಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande