ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಳೆ ವಾಕ್‌ಥಾನ್
ಬೆಂಗಳೂರು, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ಮೌಲ್ಯಾಧಾರಿತ ಶಿಕ್ಷಣ ಕ್ಷೇತ್ರದಲ್ಲಿ 2005ರಿಂದ ಸಕ್ರಿಯವಾಗಿರುವ ಎನ್‌ಜಿಒ ದಿಶಾ ಭಾರತ್ ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಡೆಸುವ “ಮೈ ಭಾರತ್” ಅಭಿಯಾನದ ಭಾಗವಾಗಿ ಈ ವರ್ಷವೂ ವಾಕ್‌ಥಾನ್ ಕಾರ್ಯಕ್ರಮವನ್ನು ಆಯೋಜಿಸಿದೆ. ದ ಮಿಥಿಕ್ ಸೊಸೈಟಿ
Walk than


ಬೆಂಗಳೂರು, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮೌಲ್ಯಾಧಾರಿತ ಶಿಕ್ಷಣ ಕ್ಷೇತ್ರದಲ್ಲಿ 2005ರಿಂದ ಸಕ್ರಿಯವಾಗಿರುವ ಎನ್‌ಜಿಒ ದಿಶಾ ಭಾರತ್ ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಡೆಸುವ “ಮೈ ಭಾರತ್” ಅಭಿಯಾನದ ಭಾಗವಾಗಿ ಈ ವರ್ಷವೂ ವಾಕ್‌ಥಾನ್ ಕಾರ್ಯಕ್ರಮವನ್ನು ಆಯೋಜಿಸಿದೆ. ದ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮ ನಾಳೆ ಬೆಳಿಗ್ಗೆ 6:30ಕ್ಕೆ, ಮಲ್ಲೇಶ್ವರಂ 18ನೇ ಕ್ರಾಸ್ ಕಾರ್ಪೊರೇಷನ್ ಮೈದಾನದಿಂದ ಪ್ರಾರಂಭವಾಗಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ ನರಾಯಣ್ ಹಾಗೂ ಮಿಡಾಸ್ ಸ್ಕೂಲ್ ಆಫ್ ಎಂಟರ್‌ಪ್ರೆನರ್‌ಶಿಪ್ ಸಿಇಒ ಮದನ್ ಕುಮಾರ್ ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ದಿಶಾ ಭಾರತ್ ಟ್ರಸ್ಟಿ ರಾಜೇಶ್ ಪದ್ಮಾರ್ ಭಾಗವಹಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ ನಟಿ ಮೌಲ್ಯ ಹಾಗೂ ನಟ ಪ್ರತೀಕ್ ಉಪಸ್ಥಿತರಿರಲಿದ್ದಾರೆ. “ರಾಷ್ಟ್ರ ಮತ್ತು ಏಕತೆಯ ಕಡೆಗೆ ಒಂದು ಹೆಜ್ಜೆ” ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ವಾಕ್‌ಥಾನ್‌ನಲ್ಲಿ ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande