ವಿಜಯಪುರ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಪರ್ಸ್ ಹುಡುಕಿ ಕೊಡುವ ಮೂಲಕ ನಗರದ ಟ್ರಾಫಿಕ್ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಬಾಬು ಡೆಂಗೆ ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜ್ ಸರ್ಕಲ್ ಬಳಿ ತೆರಳುತ್ತಿದ್ದರು. ಈ ವೇಳೆ ಅಕಸ್ಮಾತ್ ಆಗಿ ಅವರ ಪರ್ಸ್ ಕೆಳಗೆ ಬಿದ್ದಿತ್ತು. ಈ ಬಗ್ಗೆ ಗೊತ್ತಾಗದ ಬಾಬು ಸ್ಥಳದಿಂದ ತೆರಳಿದ್ದರು. ಅಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಪರ್ಸ್ ದೊರೆಯಿತು. ತಕ್ಷಣ ಪರ್ಸ್‌ನಲ್ಲಿದ್ದ ಕಾರ್ಡ್ ಮೊಬೈಲ್ ನಂಬರ್‌ಗೆ ಕರೆ ಮಾಡಿ ಬಾಬು ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಬಾಬು ಅವರಿಗೆ ಕಾನ್‌ಸ್ಟೇಬಲ್‌ಗಳಾದ ಆನಂದ ಸಾಲಮಂಟಪಿ, ಎಂ.ಐ.ತೆಗ್ಗಿನಮನಿ ಪರ್ಸ್ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande