ವಿಜಯಪುರ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ವೈಷ್ಣದೇವಿ ಕ್ರಿಯೇಷನ್ಸ್ ವತಿಯಿಂದ 79ನೇ ಸ್ವಾತಂತ್ರೋತ್ಸವ ಅಂಗವಾಗಿ ನವ ನಗರದ ಸೆಕ್ಷನ್ ನಂ. 34ರ ಶ್ರೀ ಜೀವ್ಹೇಶ್ವರ ದೇವಸ್ಥಾನ ಹತ್ತಿರ ಆಗಸ್ಟ್ 14 ರಂದು ಸಂಜೆ 8 ಗಂಟೆಯಿಂದ ದೇಶಭಕ್ತಿ ಕಾರ್ಯಕ್ರಮಗಳು ನಡೆಯಲಿದೆ. ಸಂಗೀತ, ಗಾಯನ, ನೃತ್ಯ ಕಾರ್ಯಕ್ರಮಗಳೊಂದಿಗೆ ಮಧ್ಯರಾತ್ರಿ 12ಕ್ಕೆ ಧ್ವಜಾರೋಹಣ ನಡೆಯಲಿದೆ ಎಂದು ನಿರ್ಮಾಪಕ ಘನಶ್ಯಾಮ್ ಭಾಂಡಗೆ ಮಾಹಿತಿ ನೀಡಿದರು.ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಸಂದರ್ಭದಲ್ಲಿ ಚರಂತಿಮಠದ ಡಾ. ಮ.ನಿ.ಪ್ರ. ಪ್ರಭು ಸ್ವಾಮೀಜಿ, ಪಂಡ ರಾಪುರದ ಪ್ರಭಾಕರದಾದಾ ಬಜರಂಗ ಬುವಾ ಬೋಧಲೆ ಮಹಾರಾಜರು, ಕುಂದರಗಿ ಸುರಗಿರಿ ಬೆಟ್ಟದ ಲಕ್ಷ್ಮಣ ಶರಣರು, ಅಂಕಲಿಮಠದ ಬ್ರಹ್ಮಶ್ರೀ ಡಾ. ಬಸವರಾಜ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಂಸದ ಪಿ.ಸಿ. ಗದ್ದಿಗೌಡರ ಧ್ವಜಾರೋಹಣ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಾ. ಬಿ.ಆರ್. ಅಂಬೇ ಡ್ಕರರನ್ನು ಹೋಲುವ ಹಾಗೂ ವಿದ್ವಾಂಸ ಅಶೋಕ ನಗರೆ, ಪದ್ಮಶ್ರೀ ಪುರಸ್ಕೃತ ಡಾ. ವೆಂಕಪ್ಪ ಸುಗತೇಕರ, ಖ್ಯಾತ ಚಲನಚಿತ್ರ ಹಾಸ್ಯನಟ ಟೆನ್ನಿಸ್ ಕೃಷ್ಣ, ನಟ ಗೌರೀಶ ಅಕ್ಕಿ, ನಟಿ ಯೋಗಿತಾ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾ ರಾವ್, ಕೆಬಿಜೆ ಎನ್.ಎಲ್. ಆಲಮಟ್ಟಿ ಮುಖ್ಯ ಅಭಿಯಂತರ ಬಸವರಾಜ, ಡಿ. ಬೀಳಗಿ ಶುಗರ್ಸ್ ಸಂಸ್ಥೆಯ ಲಕ್ಷ್ಮಣ ನಿರಾಣಿ, ಎಸ್.ಎಸ್. ಆರ್.ಇ.ಎಸ್. ಡಬ್ಲೂ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಲಿಂಗಸ್ವಾಮಿ ನವಲಿಹಿರೇಮಠ, ಬಾಗಲಕೋಟೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಗದ್ದಿ, ಬೀಳಗಿ ಪಟ್ಟಣ ಸಹಕಾರಿ ನಿಯಮಿತದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ನಗರದ ಖ್ಯಾತ ವೈದ್ಯ ಡಾ. ಉದಯಕುಮಾರ ಗುಳೇದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಘನಶ್ಯಾಮ್ ಭಾಂಡಗೆ ಹೇಳಿದರು.
ಉಮೇಶ ಬರ ಗುಂಡಿ, ಶಿವು ಓಬಳಿ, ಮಂಜುನಾಥ ಹೊಸಮನಿ, ಆನಂದ ಹಬೀಬ, ಮೆಹಬೂಬ ತೊನ ಶ್ಯಾಳ, ಸಂಜು ಪೇಟಕರ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande