ಹೊಸಪೇಟೆ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲೆಗಳು, ಕಾಲೇಜುಗಳು, ಮಹಾವಿದ್ಯಾಲಯಗಳು ಮತ್ತು ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ನಶಾಮುಕ್ತ ಭಾರತ ಅಭಿಯಾನದಡಿ ಮಾದಕ ವಸ್ತುಗಳ ಸೇವನೆ ಮಾಡದಂತೆ ಪ್ರತಿಜ್ಞಾವಿಧಿ ಭೋಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು, ಯುವಕ ಯುವತಿಯರು, ಉದ್ಯೋಗಿಗಳು ಮತ್ತು ಇತರರು ಜಾಲತಾಣ https://nmba.dosje.gov.in/content/take-a-pledge?type=e-pledge ಮೂಲಕ ಇ-ಪ್ರತಿಜ್ಞೆ(e-pledge) ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡುವುದು ಹಾಗೂ ಈ ಎಲ್ಲಾ ಕಾರ್ಯಕ್ರಮಗಳನ್ನು ಎನ್‍ಎಂಬಿಎ (NMBA) ಮೊಬೈಲ್ ಅಪ್ ನಲ್ಲಿ ಕಡ್ಡಾಯವಾಗಿ ಅಪ್‍ಲೋಡ್ ಮಾಡಬೇಕು.
ಆಗಸ್ಟ್ 13 ರಂದು ನಶಾಮುಕ್ತ ಭಾರತ ಅಭಿಯಾನ ಕುರಿತು ಕೈಗೊಳ್ಳಲಾಗುವ ಕಾರ್ಯಕ್ರಮಗಳ ಫೋಟೋ ಮತ್ತು ವಿಡೀಯೊಗಳನ್ನು ನಶಾಮುಕ್ತ ಭಾರತ ಅಭಿಯಾನ ಆಪ್‍ನಲ್ಲಿ ಅಪ್‍ಲೋಡ್ ಮಾಡುವುದು ಹಾಗೂ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಲಗತ್ತಿಸಿರುವ ನಮೂನೆಯಲ್ಲಿ ತಿಳಿಸಬೇಕು.
ಭಾವ ಚಿತ್ರಗಳನ್ನು ddwovjnr@gmail.com ಗೆ ಕಳುಹಿಸಬೇಕು. ನಶಾಮುಕ್ತ ಭಾರತ ಅಭಿಯಾನದ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ಆ.13ರಂದು ಮಾದಕ ವಸ್ತು ಸೇವನೆ ಮಾಡದಿರಲು ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳ ವಸತಿ ನಿಲಯಗಳು, ಹಾಗೂ ಸಂಘ ಸಂಸ್ಥೆಗಳಲ್ಲಿ ಪ್ರತಿಜ್ಞೆ ವಿಧಿ ಭೋಧನೆ ಕೈಗೊಂಡು ಕೇಂದ್ರ ಸರ್ಕಾರದ ನಶಾಮುಕ್ತ ಭಾರತ್ ಅಭಿಯಾನ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್