ಆಗಸ್ಟ್ ೧೭ರಂದು ಬೃಹತ್ ಉದ್ಯೋಗ ಮೇಳ
ಬೆಂಗಳೂರು, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ಯುವಕರಿಗೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಬೃಹತ್ ಉದ್ಯೋಗ ಮೇಳ–2025 ಆಗಸ್ಟ್ 17ರಂದು ಬೆಂಗಳೂರಿನ ಸಾಯಿಬಾಬಾನಗರದ ಸಾಯಿಬಾಬಾ ವೆಲ್ಫೇರ್ ಅಸೋಸಿಯೇಷನ್ ಹಾಲ್‌ನಲ್ಲಿ ನಡೆಯಲಿದೆ. ಲಿಟಲ್ ಫ್ಲವರ್ ಸ್ಕೂಲ್, ಕರ
ಆಗಸ್ಟ್ ೧೭ರಂದು ಬೃಹತ್ ಉದ್ಯೋಗ ಮೇಳ


ಬೆಂಗಳೂರು, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ಯುವಕರಿಗೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಬೃಹತ್ ಉದ್ಯೋಗ ಮೇಳ–2025 ಆಗಸ್ಟ್ 17ರಂದು ಬೆಂಗಳೂರಿನ ಸಾಯಿಬಾಬಾನಗರದ ಸಾಯಿಬಾಬಾ ವೆಲ್ಫೇರ್ ಅಸೋಸಿಯೇಷನ್ ಹಾಲ್‌ನಲ್ಲಿ ನಡೆಯಲಿದೆ.

ಲಿಟಲ್ ಫ್ಲವರ್ ಸ್ಕೂಲ್, ಕರ್ನಾಟಕ ತಮಿಳು ಪತ್ರಕರ್ತರ ಸಂಘ, ಲಯನ್ಸ್ ಕ್ಲಬ್ ಕ್ಯಾಪಿಟಲ್ ಡಿಸ್ಟ್ರಿಕ್ಟ್ 317A ಹಾಗೂ ಟ್ಯಾನ್ಸಮ್–ಜಿಸಿಸಿ ಜಂಟಿಯಾಗಿ ಆಯೋಜಿಸಿರುವ ಈ ಮೇಳದಲ್ಲಿ ಯುಎಇ, ಓಮನ್, ಕುವೈತ್, ಸೌದಿ ಅರೇಬಿಯಾ, ಮ್ಯಾಲ್ಡೀವ್ಸ್ ಮತ್ತು ಭೂತಾನ್ ಸೇರಿದಂತೆ ವಿದೇಶಗಳಲ್ಲಿ 5,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯ. ನಿರ್ಮಾಣ, ಆರೋಗ್ಯ, ಕೌಶಲ್ಯಯುಕ್ತ ವೃತ್ತಿಗಳು, ಹೋಟೆಲ್ ನಿರ್ವಹಣೆ, ಚೈನ್ ಸ್ಟೋರ್‌ಗಳು ಸೇರಿದಂತೆ ಹಲವು ವಲಯಗಳಲ್ಲಿ ನೇಮಕಾತಿ ನಡೆಯಲಿದೆ.

ಸ್ಥಳದಲ್ಲೇ ದಾಖಲೆ ಪರಿಶೀಲನೆ ಹಾಗೂ ನೇಮಕಾತಿ ಆದೇಶ ಪತ್ರ ವಿತರಣೆಯ ವ್ಯವಸ್ಥೆಯಿದೆ. ಹೆಚ್ಚಿನ ಮಾಹಿತಿಗೆ 95148 38485 / 98432 12111 ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande