ವಿಜಯಪುರ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆಟವಾಡಲು ಹೋಗಿ ಬಾವಿಯಲ್ಲಿ ಬಾಲಕಿ ಬಿದ್ದಿದ್ದ ಬಾಲಕಿಯ ಶವ ಮಂಗಳವಾರ ಪತ್ತೆಯಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಳಿಯ ಧನಸಿಂಗ್ ( ಮೋನಪ್ಪ ನಗರ) ತಾಂಡಾದಲ್ಲಿ ಈ ಘಟನೆ ಸಂಭವಿಸಿದೆ.
ತಾಯಿಯೊಂದಿಗೆ ಕುರಿ ಮೇಯಿಸುವಾಗ ಆಟವಾಡುತ್ತಾ ಬಾವಿಯಲ್ಲಿ 8 ವರ್ಷದ ಅರ್ಚನಾ ರಾಠೋಡ ಬಾವಿಯಲ್ಲಿ ನಿನ್ನೆ ಸಾಯಂಕಾಲ ಬಾವಿಯಲ್ಲಿ ಬಿದ್ದಿದ್ದಳು.
ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande