ಹೊಸಪೇಟೆ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ತರಬೇತಿಗಳಿಗೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಆರ್‍ಎಸ್‍ಇಟಿಐ ನಿರ್ದೇಶಕ ಗಿರಿಧರ್ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರಿಗೆ ಕೈಕಸೂತಿ ಮತ್ತು ಬಟ್ಟೆ ಪೇಂಟಿಂಗ್(31ದಿನಗಳು), ಜೂಟ್ ಬ್ಯಾಗ್ ತರಬೇತಿ(13 ದಿನಗಳು), ಮೊಬೈಲ್ ದುರಸ್ತಿ ಮತ್ತು ಸರ್ವಿಸ್ ತರಬೇತಿ (30 ದಿನಗಳು), ಕೃಷಿ ಉದ್ಯಮಿ ತರಬೇತಿ(13) ಉಚಿತವಾಗಿ ತರಬೇತಿ ನೀಡಲಾಗುವುದು.
ಅರ್ಜಿದಾರರು ವಿಜಯನಗರ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಆಧಾರ ಕಾರ್ಡ್, ರೇಷನ್ ಕಾರ್ಡ್, ಅಂಕಪಟ್ಟಿ ಜೆರಾಕ್ಸ್ ಪ್ರತಿಯೊಂದಿಗೆ 3 ಪಾಸ್‍ಪೆÇೀರ್ಟ್ ಸೈಜ್ ಪೆÇೀಟೋಗಳೊಂದಿಗೆ ನಿರ್ದೇಶಕರ ಕಚೇರಿ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣ, ಪೈ ಹೋಟೆಲ್ ಎದರುಗಡೆ, ಬಸ್‍ಸ್ಟಾಂಡ್ ಹತ್ತಿರ ಹೊಸಪೇಟೆ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಆಸಕ್ತ ಅರ್ಹರು ಆ.20 ರಂದು ಸಂದರ್ಶನಕ್ಕೆ ಭಾಗವಹಿಸಬೇಕು.
ಆ.22 ರಂದು ತರಬೇತಿ ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ ಮೊ.8105001594, 8296286570, 9741987137 ಮತ್ತು 6360467103 ಸಂಪರ್ಕಿಸಲು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್