ವಿಧಾನಸಭೆಯಲ್ಲಿ ರಾಜಣ್ಣ ವಜಾ ವಿಚಾರ ; ಬಿಜೆಪಿ ಆಕ್ರೋಶ
ಬೆಂಗಳೂರು, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಧಾನ ಸಭೆ ಎರಡನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ಬಗ್ಗೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ರಾಜಣ್ಣ ಅವರನ್ನು ಯಾಕೆ ವಜಾ ಮಾಡಲಾಗಿದೆ? ಕಾರಣವನ್ನು ಸದನದಲ್ಲಿ ಸ್ಪಷ್ಟಪಡಿಸಬ
ವಿಧಾನಸಭೆಯಲ್ಲಿ ರಾಜಣ್ಣ ವಜಾ ವಿಚಾರ ; ಬಿಜೆಪಿ ಆಕ್ರೋಶ


ಬೆಂಗಳೂರು, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಧಾನ ಸಭೆ ಎರಡನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ಬಗ್ಗೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ರಾಜಣ್ಣ ಅವರನ್ನು ಯಾಕೆ ವಜಾ ಮಾಡಲಾಗಿದೆ? ಕಾರಣವನ್ನು ಸದನದಲ್ಲಿ ಸ್ಪಷ್ಟಪಡಿಸಬೇಕು,” ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.

ಸದನದಲ್ಲಿ ರಾಜಣ್ಣ ವಜಾ ವಿಚಾರ ಗದ್ದಲಕ್ಕೆ ಕಾರಣವಾಯಿತು. “ಇದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ. ಅದನ್ನು ಯಾರು ಮಾಡಿದ್ದಾರೆ? ಸರ್ಕಾರವೇ ಸ್ಪಷ್ಟನೆ ನೀಡಲಿ,” ಎಂದು ಶಾಸಕ ಸುನೀಲ್ ಕುಮಾರ್ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಅಶೋಕ್, ಸುನೀಲ್ ಹಾಗೂ ಸುರೇಶ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ಶಾಸಕರು ವಜಾದ ಹಿನ್ನೆಲೆ ತಿಳಿಸಬೇಕೆಂದು ಒತ್ತಾಯಿಸಿದರು.

ಆರ್. ಅಶೋಕ್ ಮಾತನಾಡಿ, ಕಾನೂನು ಸಚಿವರು ಏನೂ ಆಗಿಲ್ಲ ಎಂದು ಹೇಳುತ್ತಾರೆ, ಆದರೆ ಸಚಿವರ ವಜಾ ಆಗಿದೆ. ಇದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ,ಎಂದರು.

ಈ ವೇಳೆ ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, ಇದು ಅವರ ವೈಯಕ್ತಿಕ ವಿಷಯ ಎಂದರು.

ಇದಕ್ಕೆ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಇದು ಹೇಗೆ ವೈಯಕ್ತಿಕ ವಿಚಾರ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ರಾಜಣ್ಣ ವಜಾ ವಿಚಾರದಲ್ಲಿ ಪ್ರಶ್ನೋತ್ತರ ಅವಧಿ ಬಳಿಕ ಮಾಹಿತಿ ನೀಡಲಾಗುವುದು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande