ಗದಗ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಜಕೀಯ ವಲಯದಲ್ಲಿ ಈಗ ಕೋಡಿಮಠದ ಶ್ರೀಗಳ ಭವಿಷ್ಯ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. “ಅರಸನ ಅರಮನೆಗೆ ಕಾರ್ಮೋಡ ಕವಿದೀತು” ಎಂಬ ಮಾರ್ಮಿಕ ಮಾತುಗಳಿಂದ ಅವರು ರಾಜ್ಯ ಮತ್ತು ಕೇಂದ್ರದ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ನೇರ ಸಂಬಂಧ ಹೊಂದಿದಂತ ಮಾತುಗಳನ್ನು ಆಡಿದ್ದಾರೆ.
ಗದಗ ನಗರದಲ್ಲಿ ರಾಜಣ್ಣ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಗಳು “ಎರಡು ತಿಂಗಳ ಹಿಂದೆಯೇ ಹೇಳಿದ್ದೆ, ಕೇಂದ್ರಕ್ಕೂ, ರಾಜ್ಯಕ್ಕೂ ನೋವು ಆಗುತ್ತದೆ. ಈಗ ಕೇಂದ್ರದಲ್ಲಿ ಉಪ ರಾಷ್ಟ್ರಪತಿ, ಇಲ್ಲಿ ರಾಜಣ್ಣ ರಾಜೀನಾಮೆ ಕೊಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಭಾರತೀಯ ಪರಂಪರೆಯ ಪ್ರಕಾರ ಯುಗಾದಿ ಸಂದರ್ಭದಲ್ಲಿ ಜನ ಜೀವನ, ಮಳೆ-ಬೆಳೆ ಕುರಿತು, ಸಂಕ್ರಾಂತಿಯ ಸಂದರ್ಭದಲ್ಲಿ ರಾಜರು ಮತ್ತು ದೊಡ್ಡ ವ್ಯಾಪಾರಿಗಳ ಭವಿಷ್ಯ ಹೇಳಲಾಗುತ್ತದೆ ಎಂದು ವಿವರಿಸಿದ ಶ್ರೀಗಳು “ಸಂಕ್ರಾಂತಿ ಕಳೆಯುವವರೆಗೂ ಭವಿಷ್ಯ ಹೇಳೋದು ಕಷ್ಟ, ಆದರೆ ಕಾರ್ಮೋಡ ಇರೋದೇ ಇದೆ… ಕಾದು ನೋಡಿ” ಎಂದು ಸ್ಪಷ್ಟಪಡಿಸಿದರು.
ರಾಜಕೀಯದಲ್ಲಿ ಈಗಾಗಲೇ ಅಸ್ಥಿರತೆ ಮೂಡಿಸಿರುವ ಈ ಹೇಳಿಕೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / lalita MP