ಆಧಾರ್ ಸೀಡಿಂಗ್ ಮಾಡಿಸುವಂತೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸೂಚನೆ
ರಾಯಚೂರು, 11 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್ ಸೀಡಿಂಗ್ ಮಾಡಲು ಬಾಕಿ ಇರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಆಧಾರ್ ಸೀಡಿಂಗ್ ಮಾಡಲು ಕ್ರಮ ವಹಿ
ಆಧಾರ್ ಸೀಡಿಂಗ್ ಮಾಡಿಸುವಂತೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸೂಚನೆ


ರಾಯಚೂರು, 11 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ

ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್ ಸೀಡಿಂಗ್ ಮಾಡಲು ಬಾಕಿ ಇರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಆಧಾರ್ ಸೀಡಿಂಗ್ ಮಾಡಲು ಕ್ರಮ ವಹಿಸುವಂತೆ ಕೋರಲಾಗಿದೆ.

ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೇ.60 ರಿಂದ 74.99 ರವರೆಗೆ 7000 ರೂ.ಗಳು ಮತ್ತು ಶೇ.75 ಕ್ಕಿಂತ ಅಧಿಕ ಫಲಿತಾಂಶಗಳಿಸಿದ ವಿದ್ಯಾರ್ಥಿಗಳಿಗೆ 15,000 ರೂ.ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಅಥವಾ ಪೋಸ್ಟ ಖಾತೆಗೆ ಆಧಾರ್‍ಸಿಂಡಿಂಗ್ ಮಾಡಿಸಿದ್ದಲ್ಲಿ ನೇರವಾಗಿ ಕೇಂದ್ರ ಕಚೇರಿಯ ಮೂಲಕ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಅಥವಾ ಪೋಸ್ಟ ಖಾತೆಗೆ ಡಿ.ಬಿ.ಟಿ. ಮೂಲಕ ನೇರ ವರ್ಗಾವಣೆ ಮಾಡಲಾಗುತ್ತಿದೆ.

2020ರಲ್ಲಿ 245, 2021ರಲ್ಲಿ 578, 2022ರಲ್ಲಿ 496, 2023ರಲ್ಲಿ 722, 2024ರಲ್ಲಿ 333, 2025ರಲ್ಲಿ 1546 ಸೇರಿದಂತೆ ಒಟ್ಟು 3,920 ವಿದ್ಯಾರ್ಥಿಗಳು ಆಧಾರ್ ಜೋಡಣೆ ಮಾಡಿರುವುದಿಲ್ಲ. ಈ ಹಿನ್ನಲೆಯಲ್ಲಿ ಎಸ್.ಎಸ್.ಎಲ್.ಸಿ

ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್ ಸೀಡಿಂಗ್ ಮಾಡಲು ಬಾಕಿ ಇರುವ ಅರ್ಜಿಗಳಿಗೆ ಸೀಡಿಂಗ್ ಮಾಡಲು ಕ್ರಮ ವಹಿಸಿ ಈ ಕಚೇರಿಗೆ ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಆಧಾರ್ ಕಾರ್ಡನ ಪ್ರತಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande