ರಾಹುಲ್ ಗಾಂಧಿ ಬಂಧನ ಪ್ರಜಾಭುತ್ವದ ಆಶಯಗಳ ದಹನ : ಸಚಿವ ಭೋಸರಾಜು
ಬೆಂಗಳೂರು, 11 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಿಜೆಪಿಯ ಚುನಾವಣೆ ಮಹಾ ಅಕ್ರಮಗಳನ್ನು ಖಂಡಿಸಿ ಸಂಸತ್ತಿನಿಂದ ಚುನಾವಣಾ ಆಯೋಗಕ್ಕೆ ಮೆರವಣಿಗೆ ಮೂಲಕ ಜ್ಞಾಪನಪತ್ರ ಸಲ್ಲಿಸಲು ಹೊರಟಿದ್ದ ಲೋಕ ಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದರಾಗಿರುವ ಶ್ರೀಮಂತಿ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಬಂಧಿಸ
Bosraju


ಬೆಂಗಳೂರು, 11 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಿಜೆಪಿಯ ಚುನಾವಣೆ ಮಹಾ ಅಕ್ರಮಗಳನ್ನು ಖಂಡಿಸಿ ಸಂಸತ್ತಿನಿಂದ ಚುನಾವಣಾ ಆಯೋಗಕ್ಕೆ ಮೆರವಣಿಗೆ ಮೂಲಕ ಜ್ಞಾಪನಪತ್ರ ಸಲ್ಲಿಸಲು ಹೊರಟಿದ್ದ ಲೋಕ ಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದರಾಗಿರುವ ಶ್ರೀಮಂತಿ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚುನಾವಣೆ ಆಯೋಗವನ್ನೇ ದುರ್ಬಳಕೆ ಮಾಡಿಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರ ಲಾಲಸೆಗಾಗಿ ಮಾಡಿರುವ ಮತಗಳ್ಳತನವನ್ನು ದೇಶದ ಜನರ ಮುಂದೆ ಇಂಚು ಇಂಚು ತೆರೆದಿಟ್ಟರು ಎನ್ನುವ ದ್ವೇಷಕ್ಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಇಂಡಿಯಾ ಕೂಟದ ನಾಯಕರನ್ನು ಬಂಧಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಸಂವಿಧಾನ ದತ್ತವಾಗಿ ಬಂದಿರುವ ಜನರ ಹಕ್ಕುಗಳನ್ನು ರಕ್ಷಿಸಲು, ದೇಶದ ಬಡವರ ದನಿಯಾಗಿರುವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬಂಧನ, ಬಿಜೆಪಿ ಸರ್ಕಾರ ಮಾಡಿರುವ ಪ್ರಜಾಪ್ರಭುತ್ವದ ಕಗ್ಗೋಲೆ. ಬಂಧನದಿಂದ ಸತ್ಯದ ದನಿ ಅಡಗುವುದಿಲ್ಲ ಇನ್ನೂ ಹೆಚ್ಚಾಗುತ್ತದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande