ಕೊಪ್ಪಳ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆಗಷ್ಟ್ 3 ರ ಭಾನುವಾರ ಸಂಜೆ ನಡು ರಸ್ತೆಯಲ್ಲಿ ಕೊಲೆಗೀಡಾಗಿರುವ ವಾಲ್ಮೀಕಿ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕನ ಕುಟುಂಬಕ್ಕೆ ಆಸರೆ ಮತ್ತು ನ್ಯಾಯ ಕೊಡಿಸಲು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿದ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಹತ್ಯೆಯಾದ ಗವಿಸಿದ್ಧಪ್ಪ ನಾಯಕ ಕುಟುಂಬಕ್ಕೆ ಕೂಡಲೇ ಒಂದು ಖಾಯಂ ಸರಕಾರಿ ನೌಕರಿ ಹಾಗೂ ಸೂಕ್ತ ಪರಿಹಾರ ಕೊಡಬೇಕು. ಕುಟುಂಬಕ್ಕೆ ಕೇಸ್ ಮುಕ್ತಾಯವಾಗುವತನಕ ಸೂಕ್ತ ಭದ್ರತೆ ಕೊಡಬೇಕು. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಿ, ಶಿಕ್ಷಿಸಬೇಕು, ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಕ್ರಮವಹಿಸಬೇಕು. ನಿಷ್ಪಕ್ಷಪಾತವಾದ ತನಿಖೆ ನಡೆಸಿ, ವಿಶೇಷ ನ್ಯಾಯಾಲಯದಲ್ಲಿ ತುರ್ತಾಗಿ ಇತ್ಯರ್ಥಪಡಿಸಬೇಕು. ವಾಲ್ಮೀಕಿ ನಾಯಕ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಕ್ಕೆ ಕೊನೆ ಹಾಡಬೇಕು, ಇಂತಹ ವ್ಯಾಜ್ಯಗಳು ಬಂದಲ್ಲಿ ತುರ್ತು ಕ್ರಮ ಜರುಗಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಘಾತುಕ ಕಾರ್ಯಗಳು ಹೆಚ್ಚಳವಾಗುತ್ತಿದ್ದು, ಗಾಂಜಾ, ಜೂಜು, ವ್ಹೀಲಿಂಗ್, ಸೈಬರ್ ಅಪರಾಧಗಳನ್ನು ನಿರ್ಲಕ್ಷ್ಯ ತೋರದೆ ತಡೆಯುವ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕರಾದ ಶಿವನಗೌಡ ನಾಯಕ, ರಾಜುಗೌಡ ನಾಯಕ, ಬಸವರಾಜ ದಡೆಸೂಗೂರು, ಮೃತ ಗವಿಸಿದ್ದಪ್ಪನ ತಂದೆ ನಿಂಗಪ್ಪ ನಾಯಕ, ಮುಖಂಡರಾದ ಸಿ.ವಿ. ಚಂದ್ರಶೇಖರ, ಬಸವರಾಜ ಕ್ಯಾವಟರ್, ಡಾ. ಕೆ.ಎನ್. ಪಾಟೀಲ, ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಶರಣಪ್ಪ ನಾಯಕ, ಸುರೇಶ ಡೊಣ್ಣಿ, ಬಂಗಾರು ಲಕ್ಷ್ಮಣ, ರವಿ, ಮುಖಂಡರುಗಳಾದ ಟಿ. ರತ್ನಾಕರ, ನಾಗರಾಜ ಬಿಲ್ಗಾರ, ಯಮನೂರಪ್ಪ ನಾಯಕ, ಶಿವಮೂರ್ತಿ ಗುತ್ತೂರು, ಮಂಜುನಾಥ ಜಿ. ಗೊಂಡಬಾಳ, ಮಾರುತಿ ತೋಟಗಂಟಿ, ವೀರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಶಿವರಡ್ಡಿ ವಕೀಲರು, ಹನುಮೇಶ ನಾಯಕ, ಸಿ. ಗದ್ದೆಪ್ಪ, ರುಕ್ಮಣ್ಣ ಶಾವಿ, ಕರಿಯಪ್ಪ ಬೀಡನಾಳ, ಬಸವರಾಜ ಬಿ. ಲಿಂಗೇಶ ಕಲ್ಗುಡಿ, ಜ್ಯೋತಿ ಎಂ. ಗೊಂಡಬಾಳ, ವಿಶಾಲಾಕ್ಷಿ ವಾಲ್ಮೀಕಿ, ಸುಮಂಗಲಾ ನಾಯಕ ಸೇರಿ ಅನೇಕರು ಇದ್ದರು.
ಅನೇಕ ಸಮುದಾಯ, ರಾಜಕೀಯ ಪಕ್ಷದ ಮುಖಂಡರು ಮತ್ತು ಸಂಘಟನೆಗಳು ಬಂದ್ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತ ಬಂದ್ ಮಾಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್