ಬಿಜೆಪಿ ಕಚೇರಿಗೆ ನೂತನ ಮೇಯರ್, ಉಪ ಮೇಯರ್ ಭೇಟಿ
ವಿಜಯಪುರ, 11 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಕಮಲ‌ ಅರಳಿದ್ದು, ನೂತನ ಮೇಯರ್ ಆಗಿ ಆಯ್ಕೆಯಾದ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಸುಮಿತ್ರಾ ಜಾಧವ ಅವರು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಈ ವೇಳೆ ಪಕ್ಷದ ಪದಾಧ
ಮೇಯರ್


ವಿಜಯಪುರ, 11 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಕಮಲ‌ ಅರಳಿದ್ದು, ನೂತನ ಮೇಯರ್ ಆಗಿ ಆಯ್ಕೆಯಾದ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಸುಮಿತ್ರಾ ಜಾಧವ ಅವರು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಈ ವೇಳೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪಾಲಿಕೆಯ ಬಿಜೆಪಿ ಸದಸ್ಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ನೂತನ ಮೇಯರ್ ಎಂ.ಎಸ್. ಕರಡಿ ಮಾತನಾಡಿ, ಬಿಜೆಪಿ ದೇಶಾಭಿಮಾನ ಉಸಿರಾಗಿಸಿಕೊಂಡ ಪಕ್ಷ, ಈ ಪಕ್ಷದ ಸದಸ್ಯನಾಗಿರುವುದೇ ನನಗೆ ಹೆಮ್ಮೆ, ಸಮಸ್ತ ಪಕ್ಷದ ಮುಖಂಡರ, ಪದಾಧಿಕಾರಿಗಳು, ಪಾಲಿಕೆ ಬಿಜೆಪಿ ಸದಸ್ಯರ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದ ಬಲದಿಂದ ಈ ಹುದ್ದೆ ಒಲಿದು ಬಂದಿದೆ, ನಗರದ ಸರ್ವತೋಮುಖ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.

ಉಪಮೇಯರ್ ಸುಮಿತ್ರಾ ಜಾಧವ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ರಾಹುಲ್ ಜಾಧವ, ಸ್ವಪ್ನಾ ಕಣಮುಚನಾಳ, ಪ್ರೇಮಾನಂದ ಬಿರಾದಾರ, ವಿಠ್ಠಲ ಹೊಸಪೇಟ, ಗಿರೀಶ ಪಾಟೀಲ, ಕಿರಣ ಪಾಟೀಲ, ಜವಾಹರ ಗೋಸಾವಿ, ಭೀಮಾಶಂಕರ ಹದನೂರ, ಮಂಜುನಾಥ ಮೀಸೆ, ಮಹೇಂದ್ರ ನಾಯಕ, ಚಿದಾನಂದ ಚಲವಾದಿ, ಮಲ್ಲು ಕಲಾದಗಿ, ಆನಂದ ಮುಚ್ಚಂಡಿ, ಕಾಂತು ಶಿಂಧೆ, ವಿಜಯ ಜೋಶಿ, ರಾಜೇಶ ತಾವಸೆ, ಸಂಪತ್ ಕೋವಳ್ಳಿ, ಡಿ.ಜಿ. ಬಿರಾದಾರ, ಸಂತೋಷ ನಿಂಬರಗಿ, ರಾಜು ಡೊಳ್ಳಿ, ಅನೀಲ ಉಪ್ಪಾರ, ಸಂತೋಷ ಜಾಧವ, ಬಾಲರಾಜ ರೆಡ್ಡಿ, ಗೀತಾ ಚೌದರಿ, ಡಾ.ಮಹಾನಂದಾ ಪಾಟೀಲ, ರೇಣುಕಾ ಹೊಸಮನಿ, ಶಾಂತಾ ಉತ್ಲಾಸರ, ಸುಷ್ಮಿತಾ ತಳೇವಾಡ, ಸಾವಿತ್ರಿ ಹಿಕ್ಕನಗುತ್ತಿ, ದಾನಮ್ಮ ಕಮತಗಿ, ಭಾರತಿ ಭೂಯ್ಯಾರ ಮೊದಲಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande