ಗದಗ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಹಾಗು ಗದಗ ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಪೋಲಿಸ್ ಸಹೋದರರ ಜೊತೆಗೆ ವಿಭಿನ್ನವಾಗಿ ಆಚರಿಸಿದರು.
ಮಹಿಳಾ ಮೋರ್ಚಾ ಗದಗ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮೀ ಮಾನ್ವಿ ಮಾತನಾಡಿ ಪೋಲಿಸ್ ಇಲಾಖೆಯ ಸಹೋದರರಿಗೆ ರಕ್ಷ ಬಂಧನದ ನಿಮಿತ್ಯ ರಾಕಿ ಕಟ್ಟಿ ಸಾರ್ವಜನಿಕರ ನಿರಂತರ ಸೇವೆಯನ್ನು ಕೋಡುವ ಹಾಗು ಹಬ್ಬ, ಹರಿದಿನ ಎನ್ನದೆ ನಿರಂತರ ಕೆಲಸದಲ್ಲಿರುವ ಸಹೋದರರಿಗೆ ರಾಕಿ ಕಟ್ಟಿರುವುದು ಸಂತೋಷದ ವಿಷಯ ಎಂದು ಸಂದರ್ಭೊಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಪ್ರಮುಖರಾದ ಶಾರದಾ ಸಜ್ಜನರ, ಜಯಶ್ರೀ ಉಗಲಾಟದ, ವಂದನಾ ವರ್ಣೇಕರ, ರತ್ನಾ ದಾಸರ, ಗದ ಮರಳ ಪ್ಲೇಗ್ಗ ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ನಗರಸಭಾ ಸದಸ್ಯರಾದ ಅನೀಲ ಅಬ್ಬಿಗೇರಿ, ಪಾರ್ವತಿ ಪಟ್ಟಣಶೆಟ್ಟಿ, ಪ್ರೀತಿ ಹೊನಗುಡಿ, ಶ್ರೀದೇವಿ ಲಕ್ಮಾಪೂರ,ಸ್ವಾತಿ ಅಕ್ಕಿ, ಸುಮಂಗಲಾ ಕೊನೆವಾಲ, ಶೇಖವ್ವ ಮಾಸರೆಡ್ಡಿ ಹಾಗೂ ಗದಗ ಶಹರ ಪೋಲಿಸ್ ಸಿಬ್ಬಂದಿಗಳು ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಇನ್ನೂ ಹಲವಾರು ಪ್ರಮುಖರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP