ಮಧ್ಯಾರಾಧನೆ ಶ್ರದ್ಧಾ ಭಕ್ತಿಯಿಂದ ಆಚರಣೆ
ವಿಜಯಪುರ, 11 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮೀಜಿಗಳ ೩೫೪ ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಸುಪ್ರಭಾತ, ನಂತರ ಶ್ರೀಹರಿ ವಾಯುಸ್ತುತಿ ಪುನಶ್ಚ
ರಾಘವೇಂದ್ರ


ವಿಜಯಪುರ, 11 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮೀಜಿಗಳ ೩೫೪ ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಸುಪ್ರಭಾತ, ನಂತರ ಶ್ರೀಹರಿ ವಾಯುಸ್ತುತಿ ಪುನಶ್ಚರಣ ಸಪ್ತಕಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯಿತು, ನಂತರ ಪೂರ್ಣಾಹುತಿ ಸಮರ್ಪಣೆ ನಡೆಯಿತು. ಸಂಜೆ ಪಲ್ಲಕ್ಕಿ ಸೇವೆ ಮೊದಲಾದ ಕಾರ್ಯಕ್ರಮಗಳು ಜರುಗಿದವು.

ಶ್ರೀನಿವಾಸ ಆಚಾರ ಪೂಜಾರ ಗೋಠೆ, ವಿಡಿಎ ಮಾಜಿ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶ್ರೀನಿವಾಸ ಬೇಟಗೇರಿ, ಅಪ್ಪಣ್ಷ ಗಾಯಿ, ಪ್ರಕಾಶ ಅಕ್ಕಲಕೋಟ, ವಿಜಯ ಜೋಶಿ ನಂದಕಿಶೋರ ಕುಲಕರ್ಣಿ, ವಿನಾಯಕ ಕುಲಕರ್ಣಿ, ವಾಮನ ಕುಲಕರ್ಣಿ, ಪಿ.ಬಿ. ತಾವಿಲದಾರ, ಪ್ರವೀಣ ಜೋಶಿ, ಸೋಮಶೇಖರ್, ವರುಣ ದಿವಾಣಜಿ, ಉಮೇಶ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಶ್ರೀಹರಿ ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ಅನೀಲ್ ಅಗ್ನಿಹೋತ್ರಿ, ವೆಂಕಟೇಶ್ ಗುಡಿ ದತ್ತಾತ್ರೇಯ ಕುಲಕರ್ಣಿ, ಸುಧೀಂದ್ರ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande