ಕುಲ್ಗಾಮ್, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಕಾಡಿನಲ್ಲಿ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಸೋಮವಾರ 11ನೇ ದಿನಕ್ಕೂ ಮುಂದುವರೆದಿದೆ.
ದಟ್ಟ ಕಾಡು ಹಾಗೂ ನೈಸರ್ಗಿಕ ಗುಹೆಗಳಲ್ಲಿ ಅಡಗಿರುವ ಉಗ್ರರನ್ನು ಸುತ್ತುವರೆದ ಭದ್ರತಾ ಪಡೆಗಳು, ಭಾರೀ ಗುಂಡಿನ ಚಕಮಕಿಯ ನಡುವೆ ಶೋಧ ಕಾರ್ಯ ಮುಂದುವರೆಸಿವೆ.
ಈವರೆಗೂ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಇಬ್ಬರು ಸೇನಾ ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನೂ ಒಂಬತ್ತು ಸೈನಿಕರು ಗಾಯಗೊಂಡಿದ್ದಾರೆ. ಅಂದಾಜು 8 ಭಯೋತ್ಪಾದಕರು ಮೂರು ವಿಭಿನ್ನ ಸ್ಥಳಗಳಲ್ಲಿ ಅಡಗಿಕೊಂಡಿದ್ದು, ಹಗಲು ವೇಳೆ ಗುಂಡಿನ ಚಕಮಕಿ ತಪ್ಪಿಸಿ, ರಾತ್ರಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಭದ್ರತಾ ಪಡೆಗಳು ಡ್ರೋನ್, ಹೆಲಿಕಾಪ್ಟರ್ ಹಾಗೂ ಪ್ಯಾರಾ ಕಮಾಂಡೋಗಳ ನೆರವಿನಿಂದ ಉಗ್ರರ ಪತ್ತೆಗೆ ಬೃಹತ್ ಶೋಧ ಕಾರ್ಯಾಚರಣೆ ಕೈಗೊಂಡಿವೆ. ಆಗಸ್ಟ್ 1ರಂದು ಗುಪ್ತಚರ ಮಾಹಿತಿ ಆಧಾರದಲ್ಲಿ ಪ್ರಾರಂಭವಾದ ಈ ಎನ್‌ಕೌಂಟರ್ ಕಣಿವೆಯ ಇತ್ತೀಚಿನ ದಿನಗಳಲ್ಲಿಯೇ ಅತಿ ದೀರ್ಘವಾದ ಉಗ್ರವಿರೋಧಿ ಕಾರ್ಯಾಚರಣೆಯಾಗಿ ದಾಖಲಾಗಿದೆ.
ಜಮ್ಮು–ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಳಿನ್ ಪ್ರಭಾತ್ ಹಾಗೂ ಸೇನಾ ಉತ್ತರ ಕಮಾಂಡರ್ ಲೆ.ಜನ. ಪ್ರತೀಕ್ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯನ್ನು ನಿಗಾ ವಹಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa