ಬಳ್ಳಾರಿ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : `ಹರ್ ಘರ್ ತಿರಂಗಾ' ಅಭಿಯಾನವು ದೇಶದ ಜನತೆಯಲ್ಲಿ ರಾಷ್ಟ್ರ ಪ್ರೇಮ, ದೇಶಭಕ್ತಿಯನ್ನು ಪ್ರೋತ್ಸಾಹಿಸುತ್ತದೆ ಎಂದು `ಸೇವಾ ರತ್ನ' ಪ್ರಶಸ್ತಿ ಪುರಸ್ಕøತ ಮಾಜಿ ಸೈನಿಕ ಬಿ. ಪ್ರಹ್ಲಾದರೆಡ್ಡಿ ಅವರು ತಿಳಿಸಿದ್ದಾರೆ.
ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಎಸ್‍ಜಿಟಿ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಮನುಕುಲ ಆಶ್ರಮ ಟ್ರಸ್ಟ್ ಸಹಯೋಗದಲ್ಲಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ನಡೆದ `ಹರ್ ಘರ್ ತಿರಂಗಾ ಪ್ರಚಾರ - 2025'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತಗಳಾಗಿವೆ. ಯಾವುದೇ ಜಾತಿ, ಧರ್ಮದವರಿದ್ದರೂ ನಾವೆಲ್ಲರೂ ಭಾರತೀಯರು ಎಂಬ ಅಂಶವನ್ನು ನಮ್ಮ ರಾಷ್ಟ್ರಧ್ವಜ ಮೂಡಿಸುತ್ತದೆ ಎಂದರು.
ಮತ್ತೋರ್ವ ಮಾಜಿ ಸೈನಿಕ ಶೇಕ್‍ಸಾಬ್ ಅವರು, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ವಿಶ್ವದಲ್ಲಿ ಭಾರತ, ಭಾರತದಲ್ಲಿ ಕರ್ನಾಟಕ ಶಾಂತಿ, ನೆಮ್ಮದಿಯ ನಾಡು ಎಂದು ಖ್ಯಾತಿ ಪಡೆದಿದೆ ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಳ್ಳಾರಿ ನಗರ ಸಂಚಾಲಕಿ ಬಿ.ಕೆ. ನಿರ್ಮಲ,
ತಂಜಾವೂರು ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಟಿ. ಸುಂದರ, ಕಲ್ಯಾಣಸ್ವಾಮಿ ಮಠದ ಕಲ್ಯಾಣ ಶ್ರೀಗಳು ವೇದಿಕೆಯಲ್ಲಿದ್ದರು.
ಭಾಸ್ಕರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್‍ಜಿಟಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ. ನಾಗರಾಜ್ ಮತ್ತು ಅಧ್ಯಕ್ಷ ಎಸ್. ಎನ್. ರುದ್ರಪ್ಪ ಅವರು ವೇದಿಕೆಯಲ್ಲಿದ್ದರು.
ಎಸ್‍ಜಿಟಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರೀನಾರೆಡ್ಡಿ ಅವರು ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನುಕುಲ ಆಶ್ರಮ ಟ್ರಸ್ಟ್ ಸಂಸ್ಥಾಪಕ ಬಿ.ವಿ. ಮಲ್ಲಿಕಾರ್ಜುನ ಅವರು ವಂದಿಸಿದರು. ಪವಿತ್ರ, ಬಿ.ಎಂ. ಕಲ್ಯಾಣಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ತೊಗಲು ಗೊಂಬೆಯಾಟ: ಮನುಕುಲ ಆಶ್ರಮ ಟ್ರಸ್ಟ್ `ಕನಕದಾಸ' ತೊಗಲುಗೊಂಬೆಯಾಟ ಗಮನ ಸೆಳೆಯಿತು. ರಾಷ್ಟ್ರ ನಾಯಕರ ಪೆÇೀಷಾಕು ಧರಿಸಿದ ಚಿಣ್ಣರು, ವಿದ್ಯಾರ್ಥಿಗಳು ಮೆಚ್ಚುಗೆ ಗಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್