ಬಳ್ಳಾರಿ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರ ಇಂದಿರಾಗಾಂಧಿ ಡಿಸಬಿಲಿಟಿ ಪೆನ್ಸನ್ ಸ್ಕೀಂನ ಮಾಶಾಸನವನ್ನು ಕೇಂದ್ರ ಸರ್ಕಾರ ರೂಪಾಯಿ 5000 ಮತ್ತು ರಾಜ್ಯ ಸರ್ಕಾರ 5000 ದಂತೆ ಒಟ್ಟು 10,000 ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷ ಜಿ. ಎನ್. ನಾಗರಾಜ್ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಸರಾಸರಿ 6000 ರೂಪಾಯಿಗಳನ್ನು ಸರ್ಕಾರ ನೀಡುತ್ತಿದೆ. ಶೇ.80 ರಷ್ಟು ವಿಕಲತೆ ಹೊಂದಿರುವವರಿಗೆ ಹತ್ತು ಸಾವಿರ, ನೂರರಷ್ಟು ವಿಕಲತೆ ಹೊಂದಿರುವವರಿಗೆ 15ಸಾವಿರ ರೂಪಾಯಿಗಳನ್ನು ಆಂಧ್ರಪ್ರದೇಶ ಸರ್ಕಾರ ಪಾವತಿಸುತ್ತಿದೆ.
ರಾಜಸ್ಥಾನದಲ್ಲಿ ಬೆಲೆ ಏರಿಕೆಯ ಸೂಚ್ಯಂಕಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆಯ ರೂಪದಲ್ಲಿ ವಾರ್ಷಿಕ ಶೇ.15 ರಷ್ಟು ಪಿಂಚಣಿ ಹೆಚ್ಚಳಕ್ಕೆ ಶಾಸನ ಸಭೆಯಲ್ಲಿ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ನಮ್ಮ ರಾಜ್ಯದಲ್ಲೂ ಸಹ ಹತ್ತು ಸಾವಿರ ರೂಪಾಯಿಗಳ ಪಿಂಚಣಿಯನ್ನು ನೀಡಲು ಆಗ್ರಹಿಸಿ ರಾಜಭವನ ಮತ್ತು ವಿಧಾನಸೌಧ ಚಲೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
`ಅಂಗವಿಕಲರ ರೈತ ಸಂಘ'
ವಿಕಲಚೇತನರು ಕೃಷಿ ಕೆಸಲವನ್ನು ಮಾಡಲು ತೊಂದರೆಯಾಗುತ್ತಿದೆ. ತುಂಡು ಭೂಮಿ ಹೊಂದಿರುವ ವಿಕಲಚೇತನರಿಗೆ ವಿಶೇಷವಾಗಿ ಕೆಲಸ ಮಾಡಲು ಪೂರಕ ವಾತವರಣಗಳನ್ನು ನಿರ್ಮಾಣ ಮಾಡುವ ಸಲುವಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳು ವಿಕಲಚೇತನ ಸ್ನೇಹಮಯ ಯಂತ್ರೋಪಕರಣಗಳನ್ನು ಅಭಿವೃದ್ಧಿ ಮಾಡಬೇಕು. ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಹೆಚ್ಚಿನ ಧನಸಹಾಯವನ್ನು ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಯು. ಬಸವರಾಜ್, ಗುರುಸಿದ್ಧಮೂರ್ತಿ ಮತ್ತು ಜೆ. ಸತ್ಯಬಾಬು ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್