ಕೋಲಾರ,೧೧ ಆಗಸ್ಟ್ (ಹಿ. ಸ.) :
ಆ್ಯಂಕರ್ : ದೇಶದಲ್ಲೇ ಅತ್ಯಂತ ಪವಿತ್ರ ಹಾಗೂ ಹಿಂದೂಗಳ ಶ್ರದ್ಧಾಕೇಂದ್ರವಾಗಿ ಗುರುತಿಸಲ್ಪಟ್ಟಿರುವ ಧರ್ಮಸ್ಥಳದ ವಿರುದ್ದ ಅಪಪ್ರಚಾರವನ್ನು ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿರುವ ಬಜರಂಗದಳ ಮುಖಂಡ ಬಾಲಾಜಿ, ರಾಜ್ಯ ಸರ್ಕಾರದ ದೃಷ್ಟಿ ನಮ್ಮ ಧಾರ್ಮಿಕ ಕೇಂದ್ರಗಳನ್ನೇ ಗುರಿಯಾಗಿಸಿದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಹಿಂದು ಧರ್ಮದ ಪವಿತ್ರ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಹೆಸರನ್ನು ಕೆಡಿಸಲು ಕೆಲವು ಕಿಡಿಗೇಡಿ ಸಂಘಟನೆಗಳು ಮಾಡಿರುವ ಷಡ್ಯಂತ್ರ ಇದಾಗಿದ್ದು, ಇದರ ಹಿಂದೆ ಇರುವವರ ನಿಜಬಣ್ಣ ಬಯಲು ಮಾಡಲು ಆಗ್ರಹಿಸಿದ್ದಾರೆ.
ಯಾರೋ ಅನಾಮಿಕನು ನೂರಾರು ಮಂದಿಯನ್ನು ಹತ್ಯೆ ಮಾಡಲಾಗಿದೆ, ಅತ್ಯಾಚಾರ ಮಾಡಿ ಕೊಲ್ಲಲಾಗಿದೆ ಎಂದು ತಲೆ ಕೆಟ್ಟು ನೀಡಿರುವ ಹೇಳಿಕೆಯನ್ನು ನಂಬಿ ಸರ್ಕಾರ ತನಿಖೆಗೆ ಸೂಚಿಸುವ ಮೂಲಕ ತನ್ನ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.
ಸರ್ಕಾರ ತನಿಖೆ ನಡೆಸುವ ಮೂಲಕ ಸರ್ಕಾರದ ಹಣ ಪೋಲು ಮಾಡಿರುವುದಲ್ಲದೆ ಪವಿತ್ರವಾದ ಧಾರ್ಮಿಕ ಕ್ಷೇತ್ರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದೆ ಎಂದು ದೂರಿದರು.
ಕಳೆದ ಹಲವಾರು ದಿನಗಳಿಂದ ಅನಾಮಿಕ ತೋರಿಸಿದ ೧೩ ಸ್ಥಳಗಳನ್ನು ಅಗೆದು ಶೋಧಿಸಿದರು ಯಾವೂದೇ ರೀತಿ ಮುಖವಾಡ ಧರಿಸಿರುವಾತ ಆರೋಪಿಸಿರುವಂತೆ ಯಾವೂದೇ ಯುವತಿಯರ ಕಳೆಬರಹಗಳು ಸಿಕ್ಕಿಲ್ಲವೆನ್ನುವುದು ತಿಳಿದಿದೆ, ನದಿಯಲ್ಲಿ ಬಿದ್ದ ಅನಾಥ ಶವಗಳನ್ನು ಮಣ್ಣು ಮಾಡಿರುವ ಜಾಗವನ್ನು ತೋರಿಸಿ ಕಥೆ ಕಟ್ಟಲಾಗಿದೆ. ಹಿಂದು ಧಾರ್ಮಿಕ ಪವಿತ್ರವಾದ ದೇವಾಸ್ಥಾನದ ಬಳಿಯೇ ಅನಾಥ ಶವಗಳ ಸಮಾಧಿಯನ್ನು ತೋರಿಸಿ ದಿಕ್ಕು ತಪ್ಪಿಸುವ ಜಾಲ ಈ ರೀತಿ ಅಪಪ್ರಚಾರದಲ್ಲಿ ತೊಡಗಿಸಿ ಕೊಂಡಿದೆ ಎಂದು ಪ್ರತಿಪಾದಿಸಿದರು,
ಧರ್ಮಸ್ಥಳ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಅತ್ಯಂತ ಪವಿತ್ರವಾದ ಹಾಗೂ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ, ಇಂತಹ ಸ್ಥಳದ ಮಹಿಮೆಯನ್ನು ಹಾಳು ಮಾಡುವ ಷಡ್ಯಂತ್ರ ನಡೆದಿದ್ದು,ಇದನ್ನು ಪ್ರತಿಯೊಬ್ಬ ಹಿಂದೂವು ಖಂಡಿಸುತ್ತಾನೆ ಎಂದು ತಿಳಿಸಿದ್ದಾರೆ.
ಚಿತ್ರ ಬಜರಂಗದಳ ಮುಖಂಡ ಬಾಲಾಜಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್