ಮಧ್ಯ ಪ್ರದೇಶಕ್ಕೆ ರಾಜನಾಥ ಸಿಂಗ್ ಭೇಟಿ
ಇಂದೋರ್, 10 ಆಗಸ್ಟ್ (ಹಿ.ಸ.) : ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಉಮಾರಿಯಾದಲ್ಲಿ 1,800 ಕೋಟಿ ರೂ. ವೆಚ್ಚದ ‘ಬ್ರಹ್ಮ – ಬಿಇಎಂಎಲ್ ರೈಲು ಹಬ್ ಫಾರ್ ಮ್ಯಾನುಫ್ಯಾಕ್ಚರಿಂಗ್’ ಯೋಜನೆಯ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ವಂದೇ ಭಾರತ್, ಅಮೃತ್ ಭಾರತ್
Rajnath singh


ಇಂದೋರ್, 10 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಉಮಾರಿಯಾದಲ್ಲಿ 1,800 ಕೋಟಿ ರೂ. ವೆಚ್ಚದ ‘ಬ್ರಹ್ಮ – ಬಿಇಎಂಎಲ್ ರೈಲು ಹಬ್ ಫಾರ್ ಮ್ಯಾನುಫ್ಯಾಕ್ಚರಿಂಗ್’ ಯೋಜನೆಯ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.

ವಂದೇ ಭಾರತ್, ಅಮೃತ್ ಭಾರತ್ ಹಾಗೂ ಮೆಟ್ರೋ ರೈಲು ಕೋಚ್‌ಗಳನ್ನು ತಯಾರಿಸುವ ಈ ಸ್ಥಾವರದಲ್ಲಿ ವರ್ಷಕ್ಕೆ 125–200 ಬೋಗಿಗಳ ಉತ್ಪಾದನೆಯಿಂದ ಪ್ರಾರಂಭಿಸಿ, ಐದು ವರ್ಷಗಳಲ್ಲಿ 1,100 ಬೋಗಿಗಳ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ ಭೋಪಾಲ್, ರೈಸೇನ್, ಸೆಹೋರ್, ವಿದಿಶಾ ಜಿಲ್ಲೆಗಳಲ್ಲಿ 5,000ಕ್ಕೂ ಹೆಚ್ಚು ನೇರ–ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ಪರಿಸರ ಸ್ನೇಹಿ ‘ಗ್ರೀನ್ ಫ್ಯಾಕ್ಟರಿ’ ಮಾನದಂಡಗಳಲ್ಲಿ ಸ್ಥಾವರವನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande