ನವದೆಹಲಿ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದೊಂದಿಗಿನ ವಾಯು ಸಂಘರ್ಷದ ಸಂದರ್ಭ ಸರ್ಕಾರ ನೀಡಿದ ಸಂಪೂರ್ಣ ಸ್ವಾತಂತ್ರ್ಯವೇ ಆಪರೇಷನ್ ‘ಸಿಂಧೂರ್’ ಯಶಸ್ಸಿನ ಮೂಲ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ಆಗಸ್ಟ್ 4ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಭಾನುವಾರ ಸೇನೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಏಪ್ರಿಲ್ 22ರ ಪಹಲ್ಗಾಮ್ ದಾಳಿ ದೇಶವನ್ನೇ ಬೆಚ್ಚಿಬೀಳಿಸಿತ್ತು. ದಾಳಿಯ ಮರುದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂವರು ಸೇನಾ ಮುಖ್ಯಸ್ಥರು ಸೇರಿ ತುರ್ತು ಚರ್ಚೆ ನಡೆಸಿ “ಯಾವುದೇ ರೀತಿಯ ನಿರ್ಬಂಧವಿಲ್ಲ, ಏನಾದರೂ ಮಾಡಿ” ಎಂಬ ಸ್ಪಷ್ಟ ಸಂದೇಶ ನೀಡಿದರು. ಈ ರಾಜಕೀಯ ಸ್ಪಷ್ಟತೆಯಿಂದ ಸೇನಾ ಕಮಾಂಡರ್‌ಗಳಿಗೆ ತಮ್ಮ ವಿವೇಚನೆ ಪ್ರಕಾರ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿತು.
ಏಪ್ರಿಲ್ 25ರಂದು ಉತ್ತರ ಕಮಾಂಡ್ ಭೇಟಿ ವೇಳೆ ಕಾರ್ಯಾಚರಣೆ ರೂಪುಗೊಂಡಿತು. 9 ಗುರಿಗಳಲ್ಲಿ 7ನ್ನು ನಾಶಗೊಳಿಸಿ, ಹಲವು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಏಪ್ರಿಲ್ 29ರಂದು ಪ್ರಧಾನ ಮಂತ್ರಿಯನ್ನು ಭೇಟಿಯಾದ ನಂತರ, ಕಾರ್ಯಾಚರಣೆ ದೇಶದಾದ್ಯಂತ ಪ್ರೇರಣೆಯನ್ನು ಮೂಡಿಸಿತು ಎಂದಿದ್ದಾರೆ.
ಆಪರೇಷನ್ ‘ಸಿಂಧೂರ್’ ಅನ್ನು ಜನರಲ್ ದ್ವಿವೇದಿ “ಚೆಸ್ ಆಟ”ಕ್ಕೆ ಹೋಲಿಸಿ, ಶತ್ರುಗಳ ಮತ್ತು ನಮ್ಮ ಮುಂದಿನ ಹೆಜ್ಜೆ ಊಹಿಸಲಾಗದ “ಗ್ರೇಝೋನ್” ತಂತ್ರದ ಭಾಗವೆಂದು ವಿವರಿಸಿದರು. ಕೆಲವೊಮ್ಮೆ ಶತ್ರುವನ್ನು ಚೆಕ್‌ಮೇಟ್ ಮಾಡಿದರೂ, ಕೆಲವೊಮ್ಮೆ ಅಪಾಯದಲ್ಲಿಯೂ ದಾಳಿ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa