ಗದಗ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ದಿನಾಂಕ: 12-08-2025, ಮಂಗಳವಾರ ರಂದು ಬೆಳೆಗ್ಗೆ 10-00 ಗಂಟೆಗೆ ನವಚೇತನ ಲೈವಲಿಹುಡ್ಸ ಪ್ರೈವೇಟ್ ಲಿಮಿಟೆಡ, ಮೂರನೆ ಮಹಡಿ ಹೂಸುರು ಕಾಂಪ್ಲೇಕ್ಸ ಹತ್ತಿರ ಕೆ.ಸಿ ರಾಣಿ ರೋಡ ಮಾಡೇಲ ಹೈಸ್ಕೂಲು ಎದುರುಗಡೆ ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಭಾಗವಹಿಸಲಿರುವ ಕಂಪನಿಗಳು ನವಚೇತನ ಲೈವಲಿಹುಡ್ಸ ಪ್ರೈವೇಟ್ ಲಿಮಿಟೆಡ, ಗದಗ ಭಾಗವಹಿಸಲಿವೆ.
ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಪಿ,ಯು.ಸಿ, ಡಿಪ್ಲೋಮೊ ಮತ್ತು ಯಾವುದೆ ಪದವಿ. ಹುದ್ದೆ ಪೀಲ್ಡ ಆಫೀಸರ ಪೀಲ್ಡ ಜಾಬ್ ಹುದ್ದೆಯ ಸ್ಥಳ ಗದಗ, ಲಕ್ಷೇಶ್ವರ, ಮುಂಡರಗಿ, ಹುಬ್ಬಳ್ಳಿ, ಕೂಪ್ಪಳ. ಕಡ್ಡಾಯವಾಗಿ ದ್ವಿಚಕ್ರ ವಾಹನ ಹೊಂದಿರಬೇಕು.
ವಯಸ್ಸು : 19 ರಿಂದ 30 ಪುರುಷ ಮತ್ತು ಮಹಿಳೆ ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ ಬಯೋಡಾಟಾ ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು.
ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಯುವನಿಧಿ ಯೋಜನೇಯ ಫಲಾನುಭವಿಗಳು ಈ ನೇರ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೋಳಬೇಕೆಂದು ಈ ಮೂಲಕ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ, 6363330688, 8904866603 ಕ್ಕೆ ಸಂಪರ್ಕಿಸಲು ಕೋರಲಾಗಿದೆಯೆಂದು ಜಿಲ್ಲಾ ಉದ್ಯೋಗಾಧಿಕಾರಿಯಾದ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರಸಂರ್ದಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.
ಹಿಂದೂಸ್ತಾನ್ ಸಮಾಚಾರ್ / lalita MP