ರಾಯಚೂರು, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶ್ರೀ ಈಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದೇವಸ್ಥಾನದ ಮುಂಬಾಗದಲ್ಲಿ ಹೈ-ಮಾಸ್ ಲೈಟ್ ಹಾಕಲಾಗಿದೆ. ಜಾಗ್ರತೆಯಿಂದ ಉಪಯೋಗಿಸುವ ಮೂಲಕ ನಿರ್ವಹಿಸಬೇಕೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದ್ದಾರೆ.
ರಾಯಚೂರು ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ 2024-25 ನೇ ಸಾಲಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೈ ಮಾಸ್ ಲೈಟನ್ನು ಬಟನ್ ಒತ್ತುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜನ ಸಂಪರ್ಕ ಮತ್ತು ಸಂಚಾರ ಜಾಸ್ತಿಯಿರುವಲ್ಲಿ ಕತ್ತಲೆ ಪ್ರದೇಶವಿದ್ದರೆ ಅಂತಹ ಸ್ಥಳಗಳಲ್ಲಿ ಲೈಟ್ ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ. ಹಂತ ಹಂತವಾಗಿ ಜನರ ಬೇಡಿಕೆಯಿರುವಲ್ಲಿ ಲೈಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ, ಸ್ವಚ್ಚತೆ, ವಿದ್ಯುತ್ ಸೌಲಭ್ಯಗಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪ್ರಭಾರಿ ಮಹಾಪೌರರಾದ ಸಾಜಿದ್ ಸಮೀರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಶ್ರೀನಿವಾಸ ರಡ್ಡಿ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಶಿವಬಸ್ಸಪ್ಪ ಮಾಲಿ ಪಾಟೀಲ್, ಸಂಗನಗೌಡ ಸಿರವಾರ, ಶಿವಾನಂದ ಚುಕ್ಕಿ, ಶರಣಗೌಡ, ಮಲ್ಲನಗೌಡ ಪಾಟೀಲ್ ಸೇರಿದಂತೆ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್