ಡೆಹ್ರಾಡೂನ್, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಾಚರಣೆ ಆರನೇ ದಿನವು ಮುಂದುವರೆದಿದ್ದು, ಕೆಟ್ಟ ಹವಾಮಾನದಿಂದ ಹೆಲಿಕಾಪ್ಟರ್ ಹಾರಾಟ ತಡವಾಗಿ ಪ್ರಾರಂಭವಾಗಿದೆ.
ಮಟ್ಲಿ–ಹರ್ಷಿಲ್ ನಡುವೆ ಆಹಾರ ಮತ್ತು ಪರಿಹಾರ ಸಾಮಗ್ರಿ ಸಾಗಿಸಲಾಗಿದ್ದು, ಸಂತ್ರಸ್ತರ ಸ್ಥಳಾಂತರ ಕಾರ್ಯವು ನಡೆಯುತ್ತಿದೆ. ಈವರೆಗೆ 260ಕ್ಕೂ ಹೆಚ್ಚು ಹೆಲಿ ಸುತ್ತುಗಳು ನಡೆದಿದ್ದು, ಸೇನೆಯ ಚಿನೂಕ್, ಎಂಐ, ಎಎಲ್‌ಎಚ್, ಚೀತಾ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ನೆರವಾಗಿವೆ.
ತೆಲ್ಗಡ ಗಡ್ ಬಳಿ ಗಂಗಾ ನದಿ ನೀರಿನಿಂದ ಸರೋವರ ನಿರ್ಮಾಣಗೊಂಡಿದ್ದು, ಅಪಾಯ ತಪ್ಪಿಸಲು ನಿಧಾನವಾಗಿ ನೀರು ಹೊರಹಾಕಲಾಗುತ್ತಿದೆ. ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಮಂಗಳವಾರದೊಳಗೆ ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಒಟ್ಟು 229 ಸಿಬ್ಬಂದಿ ರಕ್ಷಣಾ–ಪರಿಹಾರ ಕಾರ್ಯದಲ್ಲಿ ತೊಡಗಿದ್ದು, 14 ಗಾಯಾಳುಗಳನ್ನು ಮಟ್ಲಿ, ಏಮ್ಸ್ ರಿಷಿಕೇಶ್, ಡೆಹ್ರಾಡೂನ್ ಹಾಗೂ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa