ಅಭಿವೃದ್ಧಿ ಪ್ರತಿಯೊಬ್ಬ ಭಾರತೀಯರಿಗೆ ತಲುಪಬೇಕು : ಬೊಮ್ಮಾಯಿ
ಹಾವೇರಿ, 10 ಆಗಸ್ಟ್ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ ರೈಲು ಸಂಚರಿಸುತ್ತಿರುವುದು ಭಾರತ ಆರ್ಥಿಕತೆಯಲ್ಲಿ ಬಹಳ ಪ್ರಭಲವಾಗಿ ಮುನ್ನುಗುತ್ತಿದೆ ಎನ್ನುವುದರ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯ ರೇಲ್ವೆ ನಿಲ್ದಾಣದಲ್ಲ
Bommayi


ಹಾವೇರಿ, 10 ಆಗಸ್ಟ್ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ ರೈಲು ಸಂಚರಿಸುತ್ತಿರುವುದು ಭಾರತ ಆರ್ಥಿಕತೆಯಲ್ಲಿ ಬಹಳ ಪ್ರಭಲವಾಗಿ ಮುನ್ನುಗುತ್ತಿದೆ ಎನ್ನುವುದರ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯ ರೇಲ್ವೆ ನಿಲ್ದಾಣದಲ್ಲಿ ಬೆಂಗಳೂರು - ಬೆಳಗಾವಿ ನೂತನ ವಂದೇ ಭಾರತ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಚಾಲನೆ ನೀಡಿದ ರೈಲಿಗೆ ಹಾವೇರಿಯಲ್ಲಿ ಸ್ವಾಗತ ಮಾಡಿ, ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಹಾವೇರಿಗೆ ಇಂದು ಶುಭದಿನ ಎರಡನೇಯ ವಂದೇ ಭಾರತ ಎಕ್ಸ್‌ಪ್ರೆಸ್ ಹಾವೇರಿಯಲ್ಲಿ ನಿಲ್ಲುತ್ತಿದೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ಒಂದೇ ಭಾರತ ಎಕ್ಸ್‌ಪ್ರೆಸ್ ಹಾವೇರಿ ಜನರಿಗೂ ಸೇವೆ ಸಲ್ಲಿಸಲಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಹಾವೇರಿಗೆ ವಂದೇ ಭಾರತ ರೈಲು ನಿಲ್ಲಬೇಕು ಎಂದು ಬಹಳಷ್ಟು ಒತ್ತಡ ಇತ್ತು. ಪಧಾನಿ ನರೇಂದ್ರ ಮೋದಿ ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಪ್ರತಿ ದಿನ ಹುಬ್ಬಳ್ಳಿ ಬೆಂಗಳೂರು ನಡುವಿನ ವಂದೇ ಭಾರತ ರೈಲು ಪ್ರಯಾಣ ಮಾಡುತ್ತಿದೆ. ಹಾವೇರಿ ಜನತೆ ಒಂದು ವಂದೇ ಭಾರತ ರೈಲು ಕೇಳಿದ್ದರು, ಪ್ರಧಾನಿ ನರೇಂದ್ರ ಮೋದಿಯವರು ಎರಡು ವಂದೇ ಭಾರತ ರೈಲು ಕೊಟ್ಟಿದ್ದಾರೆ. ನಮಗೆಲ್ಲರಿಗೂ ಸಂತೋಷ ತಂದಿದೆ. ಆದರೆ, ಇದರ ಹಿಂದೆ ದೇಶ ಯಾವ ರೀತಿ ಪ್ರಗತಿ ಆಗುತ್ತಿದೆ ಎನ್ನುವ ಕಥೆ ಇದೆ. ರೈಲೆ ಮೊದಲು ಕಲಿದ್ದಿಲಿನಿಂದ ನಡೆಯುತ್ತಿತ್ತು. ಡಿಸೆಲ್ ಬಂತು. ಈಗ ವಿದ್ಯುದೀಕರಣ ಆಗಿವೆ. ಕರ್ನಾಟಕದಲ್ಲಿ ಶೇ 99 ರಷ್ಟು ವಿದ್ಯುದೀಕರಣ ಮತ್ತು ಡಬಲ್‌ಗೇಜ್ ಆಗಿವೆ. ಹೈಸ್ಪೀಡ್ ರೈಲುಗಳು ನರೇಂದ್ರ ಮೋದಿಯವರ ಕಾಲದಲ್ಲಿ ಪಾರಂಭ ಆಗಿವೆ. ಹಿಂದೇಕೆ ಆಗಲಿಲ್ಲ. ಈಗೇಕೆ ಆಗುತ್ತಿವೆ ಎನ್ನುವುದಕ್ಕೆ ನರೇಂದ್ರ ಮೋದಿಯವರ ದೂರದೃಷ್ಟಿ, ಭಾರತವನ್ನು ವಿಕಸಿತ ಭಾರತ, ಅತ್ಯಂತ ಪ್ರಭಲ ಭಾರತ ಮಾಡಲು ರೈಲ್ವೆ, ರಸ್ತೆ, ಸುಗಮವಾಗಿ ಇರಬೇಕೆಂದು ಅತಿ ಹೆಚ್ಚು ರೈಲುಗಳನ್ನು ಬಿಡುತ್ತಿದ್ದಾರೆ. ರೈಲು ಸುರಕ್ಷತೆಗೆ ಹೆಚ್ಚಿನ ಆದ್ಯತೆ, ರೈಲಿನಲ್ಲಿ ಊಟ, ಸೇವೆ ಉತ್ತಮಗೊಂಡಿದೆ. ರೈಲ್ವೆ ಚಿತ್ರಣವೇ ಬದಲಾಗಿದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande