ವಿಜಯಪುರ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪವಿತ್ರ ಶ್ರಾವಣ ಮಾಸದ 8ನೇ ದಿನವಾದ ಶುಕ್ರವಾರ ಬಾಗಲಕೋಟ ಜಿಲ್ಲೆಯ ಲೋಕಾಪುರ ಪಟ್ಟಣದಲ್ಲಿನ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣದ ಶ್ರೀಲೋಕೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ವಿಶೇಷ ಅಲಂಕಾರ, ರೂಪಕಗಳು ಲೋಕೇಶ್ವರ ನಲ್ಲಿ ಕಾಣಬಹುದು. ಹೌದು, ಶ್ರಾವಣ ಮಾಸದಂಗವಾಗಿ ಲೋಕಾಪುರದ ಶ್ರೀ ಲೋಕದ ಒಡೆಯ ಶ್ರೀ ಲೋಕೇಶ್ವರನಿಗೆ ವಿಶೇಷ ಬುತ್ತಿಪೂಜೆಯ ಮೈಲಾರಲಿಂಗೇಶ್ವರ ರೂಪಕವನ್ನು ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಕಲಾರ್ಚಕರು ತಮ್ಮ ಭಕ್ತಿಯನ್ನು ಕಲಾ ಮೂಲಕ ಸೇವೆ ಮೂಲಕ ಮಾಡಿದ್ದಾರೆ. ಪ್ರತಿ ದಿನ ಶ್ರಾವಣಮಾಸದಲ್ಲಿ ಭಕ್ತರ ದಂಡು ಲೋಕೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande