ವಿಜಯಪುರ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆಯ ಹಳಪೇಟ ಓಣಿಯ ಮನೆಯಿಂದ ಗಿರಿಸಾಗರಕ್ಕೆ ಹೋಗುತ್ತೇನೆ ಎಂದು ಹೇಳಿದ ವೀರುಪಾಕ್ಷಿ ಮಹಾದೇವಪ್ಪ ಎಳೆಮ್ಮಿ ಕಾಣೆಯಾಗಿದ್ದಾರೆ.
ವಯಸ್ಸು 35, ಒಕ್ಕಲುತನ ಉದ್ಯೋಗ ಮಾಡುತ್ತಿದ್ದು, 5.3 ಅಡಿ ಎತ್ತರ, ದುಂಡು ಮುಖ, ತಲೆಯ ಮೇಲೆ ಸ್ವಲ್ಪ ಕೂದಲು ಹೋಗಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಬೂದಿ ಬಣ್ಣದ ಪ್ಯಾಂಟ್ ಮತ್ತು ನೀಲಿ ಶರ್ಟ್ ಧರಿಸಿದ್ದರು. ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ನೀಡುವಂತೆ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande