ನವದೆಹಲಿ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಮಾಜದ ಪ್ರಗತಿಯ ಮಾನದಂಡವು ಮಹಿಳೆಯರ ಸ್ಥಿತಿಗತಿಯನ್ನು ಅವಲಂಬಿಸಿದೆ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ನುಡಿಗಳನ್ನು ಉಲ್ಲೇಖಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಸಬಲೀಕರಣದತ್ತ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳು ಎಂಬ ವಿಷಯದ ರಾಷ್ಟ್ರೀಯ ಸಮಾಲೋಚನಾ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ಮಹಿಳೆಯ ಆರ್ಥಿಕ ಸಬಲೀಕರಣವೇ ಅವರ ಹಕ್ಕುಗಳ ಮತ್ತು ಸಾಮಾಜಿಕ ಸಬಲೀಕರಣದ ಪ್ರಮುಖ ಆಯಾಮವೆಂದು ತಿಳಿಸಿದರು. ಮಹಿಳೆಯರು ಆರ್ಥಿಕವಾಗಿ ಶಕ್ತರಾದರೆ, ಅವರು ತಾನಾಗಿಯೇ ಸಮುದಾಯದಲ್ಲಿಯೂ ಸಬಲರಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್, ಈ ಸಮಾಲೋಚನೆಯನ್ನು ಮುಸ್ಲಿಂ ಮಹಿಳೆಯರ ಧ್ವನಿಗೆ ನೀತಿ ನಿರ್ಧಾರಗಳಲ್ಲಿ ಸ್ಥಾನ ದೊರೆಯುವಂತೆ ಮಾಡುವ ವೇದಿಕೆ ಎಂದು ಹೇಳಿದರು. ಕೇವಲ ಕಾನೂನು ಪುಸ್ತಕಗಳಲ್ಲ, ಸಮಾಜದ ಬದಲಾವಣೆ ಹಾಗೂ ಜನರ ಚಿಂತನೆಯಲ್ಲಿ ಬದಲಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ, ನಯಾ ದೌರ್ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಈ ಪುಸ್ತಕವು ಮುಸ್ಲಿಂ ಮಹಿಳೆಯರ ಹಕ್ಕುಗಳು, ಕಾನೂನುಗಳು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿಯನ್ನು ಒಳಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa