ಗದಗ ಜಿಲ್ಲೆಯಲ್ಲಿನ ರಸಗೊಬ್ಬರಗಳ ದಾಸ್ತಾನು ಮಾಹಿತಿ
ಗದಗ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಗದಗ ಜಿಲ್ಲೆಗೆ ಜುಲೈ 2025 ಅಂತ್ಯಕ್ಕೆ 17778 ಮೆ.ಟನ್. ಪ್ರಮಾಣದ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು, ಇಲ್ಲಿಯವರೆಗೆ 21895 ಮೆ.ಟನ್ ಯೂರಿಯಾ ರಸಗೊಬ್ಬರವನ್ನು ಜಿಲ್ಲೆಗೆ ಪೂರೈಸಲಾಗಿದೆ.ಪ್ರಸ್ತುತ 1720 ಮೆ.ಟನ್. ಯೂರಿಯಾ
ಪೋಟೋ


ಗದಗ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಗದಗ ಜಿಲ್ಲೆಗೆ ಜುಲೈ 2025 ಅಂತ್ಯಕ್ಕೆ 17778 ಮೆ.ಟನ್. ಪ್ರಮಾಣದ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು, ಇಲ್ಲಿಯವರೆಗೆ 21895 ಮೆ.ಟನ್ ಯೂರಿಯಾ ರಸಗೊಬ್ಬರವನ್ನು ಜಿಲ್ಲೆಗೆ ಪೂರೈಸಲಾಗಿದೆ.ಪ್ರಸ್ತುತ 1720 ಮೆ.ಟನ್. ಯೂರಿಯಾ ರಸಗೊಬ್ಬರವು ಜಿಲ್ಲೆಯ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಇರುತ್ತದೆ. ದಿನಾಂಕ 02-08-2025ರಂದು ಸ್ಪಿಕ್ ಸಂಸ್ಥೆಯ 300 ಮೆ.ಟನ್.ಯೂರಿಯಾ ರಸಗೊಬ್ಬರ ಪೂರೈಕೆಯಾಗಲಿದೆ.

ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಎಫ್.ಪಿ.ಓ ಗಳಿಗೆ ಸೂಚಿಸುವುದೇನೆಂದರೆ ರಸಗೊಬ್ಬರಗಳನ್ನು ಪಾಯಿಂಟ್ ಆಫ್ ಸೇಲ್ ಮೂಲಕವೇ ಮಾರಾಟ ಮಾಡವುದು, ರೈತರಿಗೆ ಬಿಲ್ಲುಗಳನ್ನು ನೀಡುವುದು, ನಿಗಧಿತ ದರಗಳಲ್ಲಿ ಮಾರಾಟ ಮಾಡುವುದು ಕಡ್ಡಾಯವಾಗಿದೆ. ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು, ಪಾಯಿಂಟ್ ಆಫ್ ಸೇಲ್‌ನಲ್ಲಿ ಬಾಕಿ ಇರುವುದು ಮತ್ತು ರೈತರಿಗೆ ಬಿಲ್ ನೀಡದಿರುವ ಬಗ್ಗೆ ರೈತರಿಂದ ದೂರುಗಳು ಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ವಿರುದ್ಧ ಫರ್ಟಿಲೈಜರ್ ಕಂಟ್ರೋಲ್ ಆರ್ಡರ್ (ಎಫ್‌ಸಿಓ) 1985 ರನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande