ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ದರ ಕಡಿತ
ನವದೆಹಲಿ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಅನಿಲ ಸಿಲಿಂಡರ್‌ಗಳ ದರವನ್ನು ₹33.50 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿವೆ. ಈ ದರ ಕಡಿತವು ಆಗಸ್ಟ್ 01ರ ಮಧ್ಯರಾತ್ರಿಯಿಂದಲೇ ಅನ್ವಯವಾಗಿದ್ದು, ನವದೆಹಲಿಯಲ್ಲಿ ಈಗ 19 ಕೆ.ಜಿ ಸಿಲಿಂಡರ್‌ನ ದರ ₹1631
Rate


ನವದೆಹಲಿ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಅನಿಲ ಸಿಲಿಂಡರ್‌ಗಳ ದರವನ್ನು ₹33.50 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿವೆ. ಈ ದರ ಕಡಿತವು ಆಗಸ್ಟ್ 01ರ ಮಧ್ಯರಾತ್ರಿಯಿಂದಲೇ ಅನ್ವಯವಾಗಿದ್ದು, ನವದೆಹಲಿಯಲ್ಲಿ ಈಗ 19 ಕೆ.ಜಿ ಸಿಲಿಂಡರ್‌ನ ದರ ₹1631.50 ಆಗಿದೆ, ಇದಕ್ಕೂ ಮುನ್ನ ₹1665.00 ಇತ್ತು.

ಈ ಕಡಿತದಿಂದ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಇತರ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಹಣಕಾಸು ರಿಯಾಯಿತಿ ದೊರೆತಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande