ಬಿಹಾರದಲ್ಲಿ ಭೀಕರ ಪ್ರವಾಹ : ಉಕ್ಕಿ ಹರಿಯುತ್ತಿರುವ ನದಿಗಳು
ಪಾಟ್ನಾ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಿಹಾರದಲ್ಲಿ ನಿರಂತರ ಮಳೆ ಹಾಗೂ ನೇಪಾಳದಿಂದ ನೀರಿನ ಬಿಡುಗಡೆಯ ಪರಿಣಾಮವಾಗಿ ಗಂಗಾ, ಕೋಸಿ, ಪುನ್‌ಪುನ್, ಗಂಡಕ್ ಸೇರಿ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪಾಟ್ನಾ, ಭಾ
Flood


ಪಾಟ್ನಾ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಿಹಾರದಲ್ಲಿ ನಿರಂತರ ಮಳೆ ಹಾಗೂ ನೇಪಾಳದಿಂದ ನೀರಿನ ಬಿಡುಗಡೆಯ ಪರಿಣಾಮವಾಗಿ ಗಂಗಾ, ಕೋಸಿ, ಪುನ್‌ಪುನ್, ಗಂಡಕ್ ಸೇರಿ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಪಾಟ್ನಾ, ಭಾಗಲ್ಪುರ್, ಕಹಲ್ಗಾಂವ್ ಮತ್ತು ಖಗೇರಿಯಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಮುಯಿ ಜಿಲ್ಲೆಯ ಝಾಝಾದಲ್ಲಿ ಸೇತುವೆ ಕುಸಿದು ಹಲವಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ಭಾರೀ ಮಳೆಯಿಂದ ಮನೆಯೊಂದು ಕುಸಿದು 49 ವರ್ಷದ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ.

ಹವೇಲಿ ಖರಗ್‌ಪುರ-ತಾರಾಪುರ ರಸ್ತೆ ಪ್ರವಾಹದಿಂದಾಗಿ ಮುಚ್ಚಲ್ಪಟ್ಟಿದೆ. ಹಲವು ಹಳ್ಳಿಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿವೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಜರುಗಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande