ರಾಷ್ಟ್ರದ ಅಭಿವೃದ್ಧಿಗೆ ಸಾಮೂಹಿಕ ಶ್ರಮ ಅಗತ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು
ಧನ್ಬಾದ್, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ವೈಯಕ್ತಿಕ ಸಾಧನೆಯೊಂದಿಗೆ ಸಾಮಾಜಿಕ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು. 2047ರ ಒಳಗಾಗಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಯುವಜನತೆ ಸಮೂಹ ಪ್ರಗತಿಗೆ ಸಾಕ್ಷಿಯಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದರು. ಜಾರ್ಖಂಡ್
President


ಧನ್ಬಾದ್, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ವೈಯಕ್ತಿಕ ಸಾಧನೆಯೊಂದಿಗೆ ಸಾಮಾಜಿಕ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು. 2047ರ ಒಳಗಾಗಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಯುವಜನತೆ ಸಮೂಹ ಪ್ರಗತಿಗೆ ಸಾಕ್ಷಿಯಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದರು.

ಜಾರ್ಖಂಡ್ ನ ಧನ್ಬಾದ್‌ನ ಐಐಟಿಯ 45ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು,

ಉದ್ಯೋಗ, ಉನ್ನತ ಶಿಕ್ಷಣ, ನಾವೀನ್ಯತೆ ಅಥವಾ ಉದ್ಯಮಶೀಲತೆಯ ದಿಕ್ಕಿನಲ್ಲಿರಬಹುದು. ಭವಿಷ್ಯದಲ್ಲಿ ವೈಯಕ್ತಿಕ ಪ್ರಗತಿಗಾಗಿ ಅಲ್ಲ, ಸಾಮೂಹಿಕ ಅಭಿವೃದ್ಧಿಗೆ ಶ್ರಮಿಸಬೇಕು, ಆಗ ಮಾತ್ರ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಮ್ಮ ಗುರಿಯನ್ನು ಸಾಧಿಸಲಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ವೇಲಕೆ 37 ಚಿನ್ನದ ಪದಕ ವಿಜೇತರಿಗೆ ಪದಕ ಹಾಗೂ ಪದವಿಗಳನ್ನು ಪ್ರದಾನಿಸ ಸಂಸ್ಥೆಯ ಶತಮಾನೋತ್ಸವ ಸ್ಮರಣಾರ್ಥವಾಗಿ ಅವರು ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande