ಬಿಹಾರ ಬಂದ್‌ಗೆ ಉಗ್ರ ಪ್ರತಿಕ್ರಿಯೆ : ರೈಲು,ರಸ್ತೆ ಸಂಚಾರ ಅಸ್ತವ್ಯಸ್ತ
ಪಾಟ್ನಾ, 09 ಜುಲೈ (ಹಿ.ಸ.) : ಆ್ಯಂಕರ್ : ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಕಾರ್ಮಿಕ ಸಂಘಗಳ ಬೇಡಿಕೆಗೆ ಬೆಂಬಲವಾಗಿ ಇಂಡಿ ಮೈತ್ರಿಕೂಟದ ಕರೆ ಮೇರೆಗೆ ಇಂದು ನಡೆದ ಬಿಹಾರ ಬಂದ್ ಗೆ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಟ್ನಾ ಸೇರಿದಂತೆ ಪ್ರಮುಖ ನಗರಗಳಲ್ಲಿ ರೈಲು ಮತ್ತು ರಸ್ತೆ ಸಂಚಾರದಲ
Band


ಪಾಟ್ನಾ, 09 ಜುಲೈ (ಹಿ.ಸ.) :

ಆ್ಯಂಕರ್ : ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಕಾರ್ಮಿಕ ಸಂಘಗಳ ಬೇಡಿಕೆಗೆ ಬೆಂಬಲವಾಗಿ ಇಂಡಿ ಮೈತ್ರಿಕೂಟದ ಕರೆ ಮೇರೆಗೆ ಇಂದು ನಡೆದ ಬಿಹಾರ ಬಂದ್ ಗೆ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಟ್ನಾ ಸೇರಿದಂತೆ ಪ್ರಮುಖ ನಗರಗಳಲ್ಲಿ ರೈಲು ಮತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಪಾಟ್ನಾದ ಮಹಾತ್ಮ ಗಾಂಧಿ ಸೇತುವೆ, ಶಹೀದ್ ಸ್ಮಾರಕ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆ ಆಯೋಗದ ಕಚೇರಿವರೆಗೆ ಕಾಲ್ನಡಿಗೆ ಮೆರವಣಿಗೆ ನಡೆಯಲಿದೆ.

ದರ್ಭಾಂಗಾ ಜಂಕ್ಷನ್‌ನಲ್ಲಿ ಆರ್‌ಜೆಡಿ ನಾಯಕರು 'ನಮೋ ಭಾರತ್' ರೈಲನ್ನು ತಡೆದಿದ್ದು, ಹಾಜಿಪುರದಲ್ಲಿ ಪ್ರತಿಭಟನಾಕಾರರು ರಸ್ತೆಗಳಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪಾಟ್ನಾ-ಹಾಜಿಪುರ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande