ವಿಜಯಪುರ, 09 ಜುಲೈ (ಹಿ.ಸ.) :
ಆ್ಯಂಕರ್ : ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ರೈತರು ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿ ಉಗಮ ಸ್ಥಳದಲ್ಲಿ ಗಂಗಾ ಪೂಜೆ ಸಲ್ಲಿಸಲು ಪ್ರಯಾಣ ಬೆಳೆಸಿದರು.
ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಮಹಾಬಳೇಶ್ವರ ದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಹಾಗೂ ಬಿಜೆಪಿ ಮುಖಂಡರು ಕಳೆದ 20 ವರ್ಷಗಳಿಂದ ಗಂಗಾ ಪೂಜೆ ಸಲ್ಲಿಸುತ್ತಿದ್ದಾರೆ. ನಾಳೆ ಗುರುವಾರ ಕಡ್ಲಿಗಾರ ಹುಣ್ಣಿಮೆ ದಿವಸದಂದು ಬೆಳಗ್ಗೆ 10-30 ಘಂಟೆಗೆ ಗಂಗಾ ಪೂಜೆ ಸಲ್ಲಿಸಲಿದ್ದಾರೆ.
ವಿಜಯಪುರದ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಿಂದ ಹೊರಟ ರೈತರು, ಗಂಗಾ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷಣೆ ಹಾಕಿದರು. ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಬಿರಾದಾರ, ಸಿದ್ರಾಮ ಕಾಖಂಡಕಿ, ಶ್ರೀವಿಜಯ ಪೂಜಾರಿ, ಆನಂದ ಬಿಸ್ಟಗೊಂಡ, ಭೀಮಾ ಶಂಕರ ಬಿಸ್ಟಗೊಂಡ, ಕಲ್ಲು ಸೊನ್ನದ, ಬಸವರಾಜ ಬಿಜಾಪುರ, ಮಲ್ಲು ಕಲಾದಗಿ, ಟಿ.ಸಿ.ಯಳಮೇಲಿ ಹಾಗೂ ಚಿನ್ನಪ್ಪ ಗಿಡ್ಡಪ್ಪಗೋಳ, ಡಾ.ರವಿ ಡೋಮನಾಳ, ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande