ಬಳ್ಳಾರಿ, 09 ಜುಲೈ (ಹಿ.ಸ.) :
ಆ್ಯಂಕರ್ : ತುಮಕೂರಿನಲಿ ನಡೆದ ಸೌತ್ ಇಂಡಿಯಾ ಇನ್ವಿಟೇಷನ್ ಟೂರ್ನ್‍ಮೆಂಟ್ ಪಂದ್ಯಾವಳಿಯಲ್ಲಿ ಬಳ್ಳಾರಿಯ ಫುಟ್‍ಬಾಲ್ ತಂಡ ಪ್ರಥಮ ಸ್ಥಾನ ಗಳಿಸಿದೆ.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ತಂಡ ಫುಟ್‍ಬಾಲ್ ಕ್ರೀಡಾಪಟುಗಳು ಫುಟ್‍ಬಾಲ್ ತರಬೇತುದಾರ ಮಹ್ಮದ್ ಮಸೂದ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು.
ಈ ಸಾಧನೆಗೆ ಜಿಲ್ಲಾಡಳಿತ ಅಭಿನಂದಿಸಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್