ರಾಯಚೂರು, 09 ಜುಲೈ (ಹಿ.ಸ.) :
ಆ್ಯಂಕರ್ : ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಹಾಗೂ ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ಆರ್.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜುಲೈ 14ರಂದು ನಡೆಯಬೇಕಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಕಾರಣಾಂತರದಿಂದ ಮುಂದೂಡಿಕೆ ಮಾಡಲಾಗಿದೆ.
ಮುಂದೂಡಿದ ಸಭೆಯನ್ನು ಜುಲೈ 18ರ ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಮಾರ್ಚ್-2025ರ ವರೆಗಿನ ಹಾಗೂ ಏಪ್ರಿಲ್ 2025 ಮಾಹೆಯಿಂದ ಜೂನ್-2025ರ ಮಾಹೆಯ ಅಂತ್ಯದವರೆಗೆ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಈ ಸಭೆಗೆ ಜಿಲ್ಲಾ ವಲಯ ಹಾಗೂ ರಾಜ್ಯ ಮತ್ತು ಕೇಂದ್ರ ವಲಯ ಯೋಜನೆಗಳ ಪ್ರಗತಿ ವರದಿಗಳನ್ನು ಕೆ.ಡಿ.ಪಿ. ನಮೂನೆಯಲ್ಲಿ ಮತ್ತು ಇಲಾಖೆಯ ಬಗ್ಗೆ ಮುಖ್ಯವಾದ ಸಂಕ್ಷಿಪ್ತ ಮಾಹಿತಿಯ ವಿವರಗಳನ್ನು ಎ4 ಸೈಜಿನ ಲ್ಯಾಂಡ್ ಸ್ಕ್ರಿಪ್ ಪೇಪರ್‍ನಲ್ಲಿ ದ್ವಿಪ್ರತಿಯಲ್ಲಿ ಮತ್ತು ಸಾಫ್ಟ್ ಪ್ರತಿಯನ್ನುzpcporcr@gmail.com ಜಿಲ್ಲಾ ಪಂಚಾಯತ್, ಯೋಜನಾ ಶಾಖೆಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್