ನವದೆಹಲಿ, 09 ಜುಲೈ (ಹಿ.ಸ.) :
ಆ್ಯಂಕರ್ : ಬ್ರಿಟನ್ ರಾಜಧಾನಿ ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ಮಂಗಳವಾರ ನಡೆದ ‘ಇಂಡಿಯಾ ಮ್ಯಾರಿಟೈಮ್ ಇನ್ವೆಸ್ಟ್‌ಮೆಂಟ್ ಶೃಂಗಸಭೆ 2025’ನಲ್ಲಿ ಭಾರತ ತನ್ನ ಕಡಲ ವಲಯದ ದೃಷ್ಟಿಕೋನ ಮತ್ತು ಬೆಳವಣಿಗೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿತು.
ಭಾರತ ಸರ್ಕಾರದ ಹಡಗು ನಿರ್ಮಾಣ ಹಣಕಾಸು ಸಹಾಯ ನೀತಿ ಅಡಿಯಲ್ಲಿ ಕೈಗೊಳ್ಳಲಾಗಿರುವ ಉಪಕ್ರಮಗಳ ವಿವರವನ್ನು ಮುಖ್ಯ ಹಡಗು ಸರ್ವೇಯರ್ ಪ್ರದೀಪ್ ಸುಧಾಕರ್ ನೀಡಿದರು. ಭಾರತ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಹಡಗು ನಿರ್ಮಾಣದಲ್ಲಿ ಜಾಗತಿಕ ನಾಯಕತ್ವದತ್ತ ಸಾಗುತ್ತಿದೆ ಎಂದು ಅವರು ಹೇಳಿದರು.
ಈ ಶೃಂಗಸಭೆಯ ಸಂದರ್ಭದಲ್ಲಿ ಭಾರತ ತನ್ನ ಹೊಸ ಕಡಲ ನೀತಿಯನ್ನೂ ಪರಿಚಯಿಸಿದ್ದು, ಹಡಗು ನಿರ್ಮಾಣ ಉದ್ಯಮಕ್ಕೆ ಆರ್ಥಿಕ ನೆರವು ಒದಗಿಸುವ ಮೂಲಕ ದೇಶೀಯ ಉತ್ಪಾದನೆಯನ್ನೂ, ಉದ್ಯೋಗಾವಕಾಶಗಳನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ನಡಿಗೆ ಹಾಕಿದೆ. ಭಾರತವನ್ನು ವಿಶ್ವಾಸಾರ್ಹ ಹೂಡಿಕೆ ತಾಣವೆಂದು ಬಣ್ಣಿಸಿದ ಅವರು ಜಾಗತಿಕ ಹೂಡಿಕೆದಾರರಿಗೆ ಭಾರತೀಯ ಕಡಲ ವಲಯದಲ್ಲಿ ಹೂಡಿಕೆಗೆ ಆಹ್ವಾನ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa